ಕಾಸರಗೋಡು: ಕಾಲೇಜು ಮತ್ತು ಪ್ರೊಫೆಷನಲ್ ತರಬೇತಿ ವಿದ್ಯಾರ್ಥಿಗಳಿಗಾಗಿ ಮಕ್ಕಳಿಗೆ ತಾಯಿಯ ಎದೆಹಾಲುಣಿಸುವ ವಿಷಯಕ್ಕೆ ಮಹತ್ವ ನೀಡುವ ಮತ್ತು ಮೊದಲ ತಾಸುಗಳಲ್ಲಿ ಎದೆ ಹಾಲುಣಿಸುವ ಬಗೆಗಿನ ಮಹತ್ವದ ಕುರಿತು "ಕಂಟೆಂಟ್ ಕ್ರಿಯೇಷನ್" ಸ್ಪರ್ಧೆ ಶೀಘ್ರದಲ್ಲೇ ನಡೆಯಲಿದೆ.
ಎದೆಹಾಲುಣಿಸುವ ಸಪ್ತಾಹ ಸಂಬಂಧ ಮಹಿಳಾ ಶಿಶು ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಐ.ಸಿ.ಡಿ.ಎಸ್. ಪ್ರೋಗ್ರಾಂ ಆಫೀಸ್ ಮತ್ತು ಜಿಲ್ಲಾವಾರ್ತಾ ಇಲಾಖೆ ಜಂಟಿ ವತಿಯಿಂದ ಸ್ಪರ್ಧೆ ಜರುಗಲಿದೆ.
ಆಸಕ್ತರು ಆ.5ರ ಮುಂಚಿತವಾಗಿ 9847922898 ಎಂಬ ವಾಟ್ಸ್ ಆಪ್ ನಂಬ್ರಕ್ಕೆ ಎಂಟ್ರಿಗಳನ್ನು ಕಳುಹಿಸಬೇಕು. ಮೊದಲ ಎರಡು ಕೃತಿಗಳಿಗೆ ಬಹುಮಾನ ಇರುವುದು.