ಪೆರ್ಲ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಥಾ ಕ್ಷೇತ್ರದ ಮಹತ್ತರ ಕೊಡುಗೆಗಳಿಂದ ಭಾಷೆಯ ಸಮೃದ್ದ ಬೆಳವಣಿಗೆಗೆ ತನ್ನದೇ ಕೊಡುಗೆಗಳನ್ನು ನೀಡಿದೆ.ಜೀವನಾನುಭವಗಳು, ವರ್ತಮಾನದ ಬದುಕು ಮತ್ತು ವಾಸ್ತವತೆಗಳ ಸಂಘರ್ಷಗಳು ಕಥೆಗಳ ಹುಟ್ಟಿಗೆ ಕಾರಣವಾಗುತ್ತದೆ ಎಂದು ಹಿರಿಯ ಸಾಹಿತಿ, ಲೇಖಕ ಹರೀಶ್ ಪೆರ್ಲ ಅವರು ತಿಳಿಸಿರು.
ಸಾಹಿತ್ಯ ಸಾಂಸ್ಕøತಿಕ ಸಂಘಟನೆಯಾದ ಪೆರ್ಲದ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ನೇತೃತ್ವದಲ್ಲಿ ಭಾನುವಾರ ಪೆರ್ಲದ ಗುಲಾಬಿ ನಿವಾಸದಲ್ಲಿ ಆಯೋಜಿಸಲಾಗಿದ್ದ ಮುಂಗಾರ ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನುಭವ, ವಿಶ್ಲೇಷಣೆಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಕಲೆ ಬಹುಮುಖಿ ಆಯಾಮದ್ದಾಗಿದ್ದು, ಮುಗಿಯದೆ ನಿತ್ಯ ಕಾಡುವ ಕಥೆಗಳು ಜನಮಾನಸದಲ್ಲಿ ಬೇರೂರಿ ಹೊಸ ಸೃಷ್ಟಿಗೆ ಕಾರಣವಾಗುತ್ತದೆ ಎಂದ ಅವರು ಹೊಸತೊಂದರ ಶಿಲ್ಪಿಯಾಗುವ ಕಥೆಗಾರ ಪಾತ್ರಗಳ ಸೃಷ್ಟಿಯ ಮೂಲಕ ಬ್ರಹ್ಮ ಸದೃಶತೆಯಿಂದ ರೂಪಕಗಳನ್ನು ಸೃಜಿಸಿ ಹೊಸ ಲೋಕವನ್ನು ಸೃಷ್ಟಿಸಿ ಆರಿವಿನ ವಿಸ್ತಾರತೆಗೆ ಕಾರಣನಾಗುತ್ತಾನೆ ಎಂದು ತಿಳಿಸಿರು.
ಕಥಾಗೋಷ್ಠಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಮಾತನಾಡಿ, ಕಥೆಗಳ ಓದು ಬದುಕಿನ ಬೌದ್ದಿಕ ಬೆಳವಣಿಗೆಯನ್ನು ಪಕ್ವಗೊಳಿಸುತ್ತದೆ. ವ್ಯಕ್ತಿಗಳಲ್ಲಿ ಅಡಗಿರುವ ನೋವು, ನಲಿವುಗಳನ್ನು ತೆರೆದಿಡುವ ಕಥಾನಕಗಳು ಕಾಲಘಟ್ಟಗಳ ಇತಿಹಾಸವಚನ್ನು ವರ್ತಮಾನದಲ್ಲಿ ಪ್ರತಿಬಿಂಬಿಸುತ್ತದೆ ಎಂದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಮಾಜೀ ಸೇನಾನಿ ತಾರಾನಾಥ ಬೋಳಾರ್, ಕವಿ ಶ್ರೀಕೃಷ್ಣಯ್ಯ ಅನಂತಪುರ, ಕವಯಿತ್ರಿ, ಶಿಕ್ಷಕಿ ಕವಿತಾ ಟಿ.ಎ.ಎನ್.ಖಂಡಿಗೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭ ಹಿರಿಯ ಸಾಹಿತಿ, ಲೇಖಕ ಹರೀಶ್ ಪೆರ್ಲ ಅವರನ್ನು ಸುಧೀರ್ಘ ಕಾಲದ ಸಾಹಿತ್ಯ ಸೇವೆಯ ಕೊಡುಗೆಗಳಿಗಾಗಿ ಅಭಿನಂದಿಸಿ ಗೌರವಿಸಲಾಯಿತು.
ಪುರುಷೋತ್ತಮ ಭಟ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸುಭಾಶ್ ಪೆರ್ಲ ವಂದಿಸಿದರು. ಆನಂದ ರೈ ಅಡ್ಕಸ್ಥಳ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ಅನಂತಪುರ ಪ್ರಾರ್ಥನೆ ಹಾಡಿದರು.
ಬಳಿಕ ನಡೆದ ಕಥಾಗೋಷ್ಠಿಯಲ್ಲಿ ಉದಯೋನ್ಮುಖ ಕತೆಗಾರರಾದ ಪ್ರಭಾವತಿ ಕೆದಿಲಾಯ, ಸುಶೀಲಾ ಪದ್ಯಾಣ, ಜ್ಯೋಸ್ಸ್ನಾ ಎಂ.ಕಡಂದೇಲು, ನಿರ್ಮಲಾ ಸೇಸಪ್ಪ ಖಂಡಿಗೆ, ಸೀತಾಲಕ್ಷ್ಮಿ ವರ್ಮ ವಿಟ್ಲ, ಅಭಿಲಾಷ್ ಎಸ್.ಬಿ., ಶ್ರೀಧರ ಭಟ್ ನಲ್ಕ ಬನಾರಿ, ಶ್ವೇತಾ ಕಜೆ, ರಾಮ ವೈ.ಬಿ.ಏದಾರ್, ಚಿತ್ತರಂಜನ್ ಕಡಂದೇಲು, ಗೋಪಾಲಕೃಷ್ಣ ಭಟ್ ವಾಟೆ ಸ್ವರಚಿತ ಕಥೆಗಳನ್ನು ವಾಚಿಸಿದರು.
ಕವಿಗಳಾದ ಶಿವ ಪಡ್ರೆ, ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಟಿ.ಎ.ಎನ್ ಖಂಡಿಗೆ, ಡಾ.ಎಸ್.ಎನ್.ಭಟ್ ಪೆರ್ಲ, ರಿತೇಶ್ ಕಿರಣ್, ಪಾಂಡುರಂಗ ಶೆಣೈ ಪೆರ್ಲ, ಸತ್ಯನಾರಾಯಣ ಹೆಗ್ಡೆ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾರ್ಯದರ್ಶಿ ಅಖಿಲೇಶ್ ಯಾದವ್ ನಗುಮುಗಂ, ಮೀಡಿಯಾ ಕ್ಲಾಸಿಕಲ್ಸ್ ನ ಕಾರ್ಯದರ್ಶಿ ಶ್ರೀಕಾಂತ್ ನಾರಾಯಣ್ ನೆಟ್ಟಣಿಗೆ, ಕವಯಿತ್ರಿ ಚೇತನಾ ಕುಂಬಳೆ, ಗೀತಾ ಜಿ.ನಾಯಕ್, ವಿಜಯಲಕ್ಷ್ಮೀ ಶೆಣೈ ಉಪಸ್ಥಿತರಿದ್ದು ಸಹಕರಿಸಿದರು. ಆನಂದ ರೈ ಅಡ್ಕಸ್ಥಳ ಗೋಷ್ಠಿ ನಿರ್ವಹಿಸಿದರು.
(ಚಿತ್ರ ಮಾಹಿತಿ:1) ಕಥಾಗೋಷ್ಠಿಯ ಉದ್ಘಾಟನೆ, ಅಧ್ಯಕ್ಷತೆ ವಹಿಸಿ ಮಾತನಾಡುತ್ತಿರುವ ಹರೀಶ್ ಪೆರ್ಲ
2)ಉದ್ಘಾಟಿಸಿ ಮಾತನಾಡುತ್ತಿರುವ ರಾಧಾಕೃಷ್ಣ ಕೆ ಉಳಿಯತ್ತಡ್ಕ, ತಾರಾನಾಥ ಬೋಳಾರ್ ಅವರು ಮಾತನಾಡುತ್ತಿರುವುದು.)