HEALTH TIPS

ವಿದ್ಯಾರ್ಥಿಗಳಿಗೆ ನವ ಚೇತನ ನೀಡಿದ ಶ್ರೀರಾಮ ಜನ್ಮೋತ್ಸವ

 
        ಬದಿಯಡ್ಕ : ಶ್ರೀರಾಮಚಂದ್ರಾಪುರ ಮಠದ ಅಂಗ ಸಂಸ್ಥೆಗಳಲ್ಲಿ ಒಂದಾದ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಸಭಾಂಗಣದಲ್ಲಿ ಶ್ರೀರಾಮ ಜನ್ಮೋತ್ಸವವನ್ನು ಇತ್ತೀಚೆಗೆ ಆಚರಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರೆಲ್ಲರೂ ಬೊಗಸೆ ತುಂಬಾ ಪುಷ್ಪವನ್ನು ಹಿಡಿದು ರಾಮತಾರಕ ಮಂತ್ರ ಜಪಿಸಿ ಶ್ರೀರಾಮನಿಗೆ  ಸಮರ್ಪಿಸಿದರು. ಶಿಕ್ಷಕಿ ರಶ್ಮಿ ಪೆರ್ಮುಖ ಕಾರ್ಯಕ್ರಮದ ಔಚಿತ್ಯವನ್ನು ಸವಿವರವಾಗಿ ಬಿತ್ತರಿಸಿದರು.
      ಶ್ರೀ ಮಠದ ನೇತೃತ್ವದಲ್ಲಿ ಸ್ಥಾಪಿಸಲುದ್ದೇಶಿಸಿದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಸ್ಥಾಪನೆಯ ಉದ್ದೇಶ ಹಾಗೂ ಶಿಕ್ಷಣ ವ್ಯವಸ್ಥೆಯ ಬಗೆಗಿನ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಆಶಯವನ್ನು ಹತ್ತನೆಯ ತರಗತಿಯ ವಿದ್ಯಾರ್ಥಿ ಶ್ರೀಹರಿ ಸವಿಸ್ತಾರವಾಗಿ ವಿವರಿಸಿದನು. ಎಂಟನೆಯ ತರಗತಿಯ ಕು. ಯತಿಕಾ ಶ್ರೀರಾಮ ಜನನದ ಕಥೆಯನ್ನು ಸಾಂದರ್ಭಿಕವಾಗಿ ವಿವರಿಸಿದಳು.
     ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಕಾರ್ಯಕ್ರಮದ ಕುರಿತು ಮಾತನಾಡಿ  ಶ್ರೀರಾಮನ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಮಾಯಣದ ಅನೇಕ ಕಥಾಪಾತ್ರಗಳು ನಮ್ಮ ಜೀವನಕ್ಕೆ ಪಾಠವಾಗಿದೆ. ಸದಾ ಒಳಿತನ್ನು ಬಯಸುವ ಶ್ರೀರಾಮನ ಆದರ್ಶ ವ್ಯಕ್ತಿತ್ವ, ಸಹೋದರರು ಪರಸ್ಪರ ಹೇಗಿರಬೇಕು ಎಂದು ಆಶಯ ವ್ಯಕ್ತಪಡಿಸಿದರು ವಿದ್ಯಾರ್ಥಿಗಳು ಸಾಂಗಿಕವಾಗಿ ರಾಮನಾಮ ತಾರಕ ಮಂತ್ರ ಪಠಿಸಿ, ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮಂಗಲವಾಯಿತು.
ಚಿತ್ರ: 30ಬಿಎವಿದ್ಯಾಪೀಠ : ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ರಾಮತಾರಕ ಮಂತ್ರ ಜಪಕ್ಕೆ ನೇತೃತ್ವವನ್ನು ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries