ಕುಂಬಳೆ: ಕಳತ್ತೂರು ಮಹಾದೇವ ಸಭಾಭವನದಲ್ಲಿ ಶ್ರೀಮಾತಾ ಮಹಿಳಾ ಸಂಘ ಕಳತ್ತೂರು ಕಿದೂರು ಇದರ ನೂತನ ಪದಾಧಿಕಾರಿಗಳನ್ನು ಸಂಘದ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
2019-20ರ ಅವಧಿಗೆ ಅಧ್ಯಕ್ಷೆಯಾಗಿ ಪ್ರೇಮಾ, ಉಪಾಧ್ಯಕ್ಷೆಯಾಗಿ ಶಾಲಿನಿ, ಕಾರ್ಯದರ್ಶಿಯಾಗಿ ಕೃಷ್ಣವೇಣಿ, ಜೊತೆ ಕಾರ್ಯದರ್ಶಿ ಯಶೋದಾ, ಕೋಶಾಧಿಕಾರಿಯಾಗಿ ಸುಂದರಿ, ಸಹಾಯಕಿಯಾಗಿ ವಿಜಯಾ ಹಾಗೂ ಪ್ರಮೀಳಾ, ಜಾನಕಿ, ಸೀತಾ, ಸುಶೀಲಾ, ಸುಜಾತಾ, ಸುಂದರಿ, ಲಲಿತಾ, ಸುನಂದಾ, ಚಂದ್ರಾವತಿ, ವಿಜಯಾ, ಶಶಿಕಲಾ, ಕಮಲಾ, ಹೇಮಾವತಿ, ಪುಷ್ಪಾ ಅವರನ್ನು ಕಾರ್ಯಕಾರಿ ಸಮಿತಿಯ ಸದಸ್ಯೆಯರಾಗಿ ಆಯ್ಕೆಮಾಡಲಾಯಿತು.
ಆ.9ರಂದು ಕಿದೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ಮಹಿಳಾ ಸಂಘದ ವತಿಯಿಂದ ಜರಗುವ 16ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮಿ ವ್ರತಾಚರಣೆಯ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.