ಕಾಸರಗೋಡು: ಕತೆ, ಕವನ, ರಚನೆ ಸ್ಪರ್ಧೆಗಳು ಮತ್ತು ಪುಸ್ತಕ ವಾಚನ ಜಿಲ್ಲಾ ಪಂಚಾಯತ್ ಅನೆಕ್ಸ್ ಸಭಾಂಗಣದಲ್ಲಿ ಜರುಗಿದುವು.
ವಾಚನ ಪಕ್ಷಾಚರಣೆ ಅಂಗವಾಗಿ ಜಿಲ್ಲಾ ಸಾಕ್ಷರತಾ ಮಿಷನ್ ಮತ್ತು ಜಿಲ್ಲಾ ವಾರ್ತಾ ಇಲಾಖೆ ಜಂಟಿ ವತಿಯಿಂದ ಹತ್ತನೇ ಮತ್ತು ಹೈಯರ್ ಸೆಕೆಂಡರಿ ತರಗತಿ ತತ್ಸಮಾನ ವಿದ್ಯಾರ್ಥಿಗಳಿಗಾಗಿ ಸೋಮವಾರ ಈ ಸ್ಪರ್ಧೆಗಳು ನಡೆದುವು.
ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಕತೆ,ಕವನ, ಪುಸ್ತಕ ವಾಚನ ಸ್ಪರ್ಧೆಗಳು ನಡೆದುವು. ಸ್ಪರ್ಧಾ ವಿಜೇತರಿಗೆ ರಾಜ್ಯ ಮಟ್ಟದ ಸಾಕ್ಷರತಾ ಮಿಷನ್ ಜುಲೈ ತಿಂಗಳಕೊನೆಯಲ್ಲಿ ನಡೆಸುವ ಸಾಹಿತ್ಯ ಶಿಬಿರದಲ್ಲಿ ಭಾಗಿಗಳಾಗಲು ಅವಕಾಶ ಲಭಿಸಲಿದೆ. ಜಿಲ್ಲಾ ವಾರ್ತಾ ಇಲಾಖೆ ವತಿಯಿಂದ ರಾಜ್ಯ ಮಾಹಿತಿ ಕೇಂದ್ರದ ಪ್ರಕಟಣೆಗಳಾದ ಕೇರಳ ಕಾಲಿಂಗ್ ಮತ್ತು ಜನಪಥಂ ಮಾಸಪತ್ರಿಕೆಗಳು ಒಂದು ವರ್ಷದ ಅವಧಿಗೆ ಉಚಿತವಾಗಿ ಲಭಿಸಲಿದೆ.
ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್ ಉದ್ಘಾಟಿಸಿದರು. ಜಿಲ್ಲಾ ವಾರ್ತಾ ಅಧಿಕಾರಿ ಮಧುಸೂದನನ್ ಎಂ.ಅಧ್ಯಕ್ಷತೆ ವಹಿಸಿದ್ದರು. ಡಯಟ್ ಪ್ರಾಂಶುಪಾಲ ಕೆ.ರಾಮಚಂದ್ರನ್ ಪ್ರಧಾನ ಭಾಷಣಮಾಡಿದರು. ಸಾಕ್ಷರತಾ ಮಿಷನ್ ಸಹಾಯಕ ಸಂಚಾಲಕ ಶಾಸ್ತಾ ಪ್ರಸಾದ್, ತತ್ಸಮಾನ ತರಬೇತಿ ಸಂಚಾಲಕ ಕೆ.ವಿ.ರಾಘವನ್ ಮಾಸ್ಟರ್, ಸಂಪನ್ಮೂಲ ವ್ಯಾಕ್ತಿ ಕೆ.ವಿ.ಸತ್ಯನಾರಾನ ರಾವ್, ವಿದ್ಯಾರ್ಥಿಗಳ ಪ್ರತಿನಿಧಿ ಅಬ್ದುಲ್ಲ ಮೌಲವಿ ಉಪಸ್ಥಿತರಿದ್ದರು.