ಮಂಜೇಶ್ವರ: ಶ್ರೀ ಅರಸು ಫ್ರೆಂಡ್ಸ್ ಕ್ಲಬ್ ಮಜಲು ಕುಂಜತ್ತೂರು ಮತ್ತು ಶ್ರೀ ಅರಸು ಬಾಲಗೋಕುಲ ಇದರ ಆಶ್ರಯದಲ್ಲಿ ಬಾಲಗೋಕುಲದ ಮಕ್ಕಳಿಗೆ ಇತ್ತೀಚೆಗೆ ಉಚಿತ ಪುಸ್ತಕ, ಬ್ಯಾಗ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಶಿವಕೃಪಾ ಅವರ ದಿವ್ಯ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿ, ಹಿರಿಯರಾದ ಕಮಲಾಕ್ಷ ಮಜಲು, ಕ್ಲಬ್ಬಿನ ಅಧ್ಯಕ್ಷ ಮೋಹನ ಶೆಟ್ಟಿ ಮಜಲು, ಮನೋಹರ ಮಜಲು, ನವೀನ ಮಜಲು, ಬಾಲಗೋಕುಲದ ಮಕ್ಕಳು, ಬಾಲಗೋಕುಲದ ಮಾತಾಜಿ ಹಾಗು ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು. ರವಿ ಮಜಲು ಸ್ವಾಗತಿಸಿ, ಅಜಿತ್ ಮಜಲು ಕಾರ್ಯಕ್ರಮ ನಿರೂಪಿಸಿದರು. ಅಕ್ಷಯ ಮಜಲು ವಂದಿಸಿದರು.