ಕಾಸರಗೋಡು: ಕಾಸರಗೋಡು ಜಿಲ್ಲಾ ಆಟೋರಿಕ್ಷಾ ಮಸ್ದೂರ್ ಸಂಘದ ನಗರಸಭಾ ಸಮಿತಿಯ ಆಶ್ರಯದಲ್ಲಿ ಬಿ.ಎಂ.ಎಸ್. ಸ್ಥಾಪನೆಯ ಅಂಗವಾಗಿ ಕುಟುಂಬ ಸಂಗಮ ಜರಗಿತು.
ಬಿ.ಎಂ.ಎಸ್. ರಾಜ್ಯ ಕಾರ್ಯದರ್ಶಿ ಸಿ.ದಿವಾಕರನ್ ಉದ್ಘಾಟಿಸಿದರು. ಕಾಸರಗೋಡು ನಗರಸಭಾ ಬಿಎಂಎಸ್ ಅಧ್ಯಕ್ಷ ಸುಂದರ ಪೂಜಾರಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕೋಶಾ„ಕಾರಿ ಅನಿಲ್ ಬಿ.ನಾಯರ್ ಶುಭಹಾರೈಸಿದರು.
ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಮುರಳೀಧರನ್ ಸಮಾರೋಪ ಭಾಷಣ ಮಾಡಿದರು. ಆಟೋ ರಿಕ್ಷಾ ರಂಗದಲ್ಲಿ 30 ವರ್ಷಗಳಿಂದ ದುಡಿದ ಹಿರಿಯರನ್ನು ಸಮ್ಮಾನಿಸಿ ಗೌರವಿಸಲಾಯಿತು. ನಗರಸಭೆ ವ್ಯಾಪ್ತಿಯ ಪ್ರಥಮ ಮಹಿಳಾ ಆಟೋ ಚಾಲಕಿ ಶೈಜಾ ಅವರನ್ನು ಅಭಿನಂದಿಸಲಾಯಿತು. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಮಿಕರ ಕುಟುಂಬದ ಸದಸ್ಯರಿಂದ ವಿವಿಧ ಕಲಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಎಸ್.ಕೆ.ಉಮೇಶ್, ವಿಶ್ವನಾಥ ಶೆಟ್ಟಿ ಮೊದಲಾದವರಿದ್ದರು. ಮೋಹನ್‍ದಾಸ್ ಸ್ವಾಗತಿಸಿ, ಕುಂಞÂರಾಮನ್ ವಂದಿಸಿದರು.