ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಜು. 04 ಭಾನುವಾರ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಆಯುಸಂಭ್ರಮ (ಆಯುರ್ವೇದ ಉತ್ಸವ-ಕರ್ಕಾಟಕ ಮಾಸದ ಔಷಧೀಯ ಆಹಾರ) ಕಾರ್ಯಕ್ರಮ ನಡೆಯಲಿದೆ. ಪರಿಸರದ ಔಷಧೀಯ ಸಸ್ಯಗಳನ್ನು ನಿತ್ಯದ ಆಹಾರದಲ್ಲಿ ಬಳಸಿ ಯಾವ ಖಾಯಿಲೆಗಳೂ ಬಾರದಂತೆ ತಡೆಗಟ್ಟಬಹುದು ಎನ್ನುವ ಮಾಹಿತಿಯನ್ನು ತಜ್ಞರಾದ ಉಡುಪಿಯ ಡಾ. ಶ್ರೀಧರ ಬೈರಿ ಮತ್ತು ಕಣ್ಣೂರಿನ ಅರವಿಂದಾಕ್ಷನ್ ವೈದ್ಯರ್ ಇವರುಗಳು ಎರಡು ಕಾರ್ಯಾಗಾರಗಳಲ್ಲಿ ನೀಡಲಿರುವರು. ಇದೇ ಸಂದರ್ಭದಲ್ಲಿ ಶ್ರೀಗಳು ಸ್ವಚ್ಛ ಪರಿಸರ, ಪ್ಲಾಸ್ಟಿಕ್ ತ್ಯಾಜ್ಯದಿಂದಾಗುವ ದುಷ್ಪರಿಣಾಮಗಳು ಇತ್ಯಾದಿ ವಿಷಯಗಳ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕೇರಳದ ಪ್ರಸಿದ್ಧ ಪಾರಂಪರಿಕ ವೈದ್ಯರುಗಳು ಆರೋಗ್ಯವೃದ್ಧಿಗಾಗಿ ಗಿಡ, ಎಲೆ, ಬಳ್ಳಿಗಳನ್ನು ಬಳಸಿ ಸಿದ್ಧಪಡಿಸಿದ ಔಷಧಿಯುಕ್ತ ಆಹಾರ ತಯಾರಿಸಿ ವಿತರಿಸುವರು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಾಹಿತಿಯ ಪ್ರಯೋಜನ ಪಡಕೊಳ್ಳಬೇಕೆಂದು ಆಶ್ರಮದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.