ಮಂಜೇಶ್ವರ: ಸುಂಕದಕಟ್ಟೆಯ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ 37 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಸೆ.2 ರಂದು ಬೆಳಿಗ್ಗೆ 58 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ ನಡೆಯಲಿದೆ. ಪ್ರಥಮ ಬಹುಮಾನ 10,000 ರೂ. ನಗದು, ಶಾಶ್ವತ ಫಲಕ, ದ್ವಿತೀಯ ಬಹುಮಾನ 7000 ರೂ. ನಗದು, ಶಾಶ್ವತ ಫಲಕ, ತೃತೀಯ ಮತ್ತು ಚತುರ್ಥ ಬಹುಮಾನ 4000 ರೂ. ನಗದು ಹಾಗು ಫಲಕ ನೀಡಲಾಗುವುದು.
ಸೆ.3 ರಂದು ಬೆಳಿಗ್ಗೆ 10 ರಿಂದ ಮುಕ್ತ ಕಬಡ್ಡಿ ಪಂದ್ಯಾಟ ಜರಗಲಿದೆ. ಪ್ರಥಮ 10,000 ರೂ. ನಗದು, ಶಾಶ್ವತ ಫಲಕ, ದ್ವಿತೀಯ 7000 ರೂ. ನಗದು, ಫಲಕ, ತೃತೀಯ ಮತ್ತು ಚತುರ್ಥ 4000 ರೂ. ನಗದು ಮತ್ತು ಫಲಕ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ 99958120160 ಸಂಪರ್ಕಿಸಬಹುದು.