HEALTH TIPS

ಚಂದ್ರಯಾನ-2: 4ನೇ ಬಾರಿ ನೌಕೆಯ ಕಕ್ಷೆ ಎತ್ತರಿಸುವ ಕಾರ್ಯ ಯಶಸ್ವಿ

        
      ಬೆಂಗಳೂರು: ಇತ್ತೀಚಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಉಡಾವಣೆ ಮಾಡಿದ ಚಂದ್ರಯಾನ-2 ನೌಕೆಯ ಕಕ್ಷೆಯನ್ನು 4ನೇ ಬಾರಿ ಎತ್ತರಿಸುವ ಕಾರ್ಯ ಶುಕ್ರವಾರ ಯಶಸ್ವಿಯಾಗಿದೆ.
   ಶುಕ್ರವಾರ ಮಧ್ಯಾಹ್ನ 3.27ಕ್ಕೆ ಈ ಕಾರ್ಯಾಚರಣೆ ನಡೆಸಲಾಗಿದೆ. ನೌಕೆಯಲ್ಲಿನ ಎಂಜಿನ್ ಅನ್ನು ಚಾಲೂ ಮಾಡಿ ಈ ಕಾರ್ಯಾಚರಣೆ ನಡೆಸಲಾಗಿದೆ. 4ನೇ ಬಾರಿ ಕಕ್ಷೆಗೇರಿಸುವ ಕಾರ್ಯ ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ.
    ನೌಕೆಯ ಹಾದಿಗೆ ಕಣ್ಗಾವಲು ಇಡಲಾಗಿದ್ದು, ಪರಿಶೀಲಿಸಲಾಗುತ್ತಿದೆ ಎಂದೂ ಇಸ್ರೊ ಹೇಳಿದೆ. ಈ ಕುರಿತ ಫೋಟೋ, ಮಾಹಿತಿಯನ್ನು ಇಸ್ರೋ ಟ್ವೀಟ್ ಮಾಡಿದೆ. ಸರಿ ಸುಮಾರು 4 ಲಕ್ಷ ಕಿ.ಮೀ ದೂರದಲ್ಲಿರುವ ಚಂದ್ರನ ಮೇಲೆ ಲ್ಯಾಂಡರ್, ರೋವರ್ ಮತ್ತು ಆರ್ಬಿಟರ್ ಒಳಗೊಂಡ 3,850 ಕಿ.ಜಿ ತೂಕದ ಚಂದ್ರಯಾನ-2 ನೌಕೆಯನ್ನು ಚಂದ್ರನ ಮೇಲ್ಮೆ? ಮೇಲೆ ಇಳಿಸಲು ಒಟ್ಟು 15 ಬಾರಿ ಎತ್ತರಿಸುವ, ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಸರಿಪಡಿಸುವ ಕಾರ್ಯವನ್ನು ಇಸ್ರೋ ನಡೆಸಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries