ಮಂಜೇಶ್ವರ: ಶ್ರೀ ಮಹಾಗಣಪತಿ ಭಜನಾ ಸಂಘ ಮದಂಗಲ್ಲುಕಟ್ಟೆ ವತಿಯಿಂದ ಜರಗುವ 39ನೇ ವರ್ಷದ ಶ್ರಿ ಗಣೇಶೋತ್ಸವವು ಸೆ. 2ರಿಂದ 4ರವರೆಗೆ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಕಾರ್ಯಕ್ರಮದ ಅಂಗವಾಗಿ ಸೆ. 2ರಂದು ಬೆಳಿಗ್ಗೆ 7ರಿಂದ ಗಣಹೋಮ, ಗಣಪತಿ ಪ್ರತಿಷ್ಠೆ, 9ರಿಂದ ಮಕ್ಕಳ ಕಬಡ್ಡಿ ಪಂದ್ಯಾಟ, 11ರಿಂದ ಶ್ರೀ ಶಾಸ್ತಾವೇಶ್ವರ ಭಜನಾ ಸಂಘ ಕೊಳಚಪ್ಪು ತಂಡದಿಂದ ಭಜನಾ ಕಾರ್ಯಕ್ರಮ, 12.30ಕ್ಕೆ ಮಹಾಪೂಜೆ ಅನ್ನಸಂತರ್ಪಣೆ ಜರಗಲಿದ್ದು ಅಪರಾಹ್ನ 3ರರಿಂದ ಬಾಲಕ ಬಾಲಕಿಯರಿಗೆ ವಿವಿಧ ಸ್ಪರ್ಧೆಗಳು ಜರಗಲಿದೆ. ರಾತ್ರಿ 8 ರಿಂದ ಶ್ರೀ ಸದಾಶಿವ ಗೋಪಾಲಕೃಷ್ಣ ಭಜನಾ ಸಂಘ ತಲೇಕಳ ತಂಡದಿಂದ ಭಜನಾ ಕಾರ್ಯಕ್ರಮ, ಮಹಾಪೂಜೆ ಜರಗಲಿದೆ.
ಸೆ. 3ರಂದು ಬೆಳಿಗ್ಗೆ 10ಕ್ಕೆ ಸಾರ್ವಜನಿಕ ಗಣಹೋಮ, 11ಕ್ಕೆ ಭಜನಾ ಕಾರ್ಯಕ್ರಮ ಓಂಕಾರ ಮಾತೃಮಂಡಳಿ ಮುರತ್ತಣೆ ಹಾಗೂ ಶ್ರೀ ಕೃಷ್ಣಜನ್ಮಾಷ್ಟಮಿ ಸಮಿತಿ ಮೊರತ್ತಣೆ ತಂಡದಿಂದ, 12.30ಕ್ಕೆ ಮಹಾಪೂಜೆ ಅನ್ನಸಂತರ್ಪಣೆ ಜರಗಲಿದೆ. ಅಪರಾಹ್ನ 2ರಿಂದ ಯಕ್ಷಗಾನ ತಾಳ ಮದ್ದಳೆ ಯಜ್ಞ ಸಂರಕ್ಷಣೆ ಯಕ್ಷಮಿತ್ರರು ಮೀಯಪದವು ತಂಡದಿಂದ ನಡೆಯಲಿದೆ. ಸಂಜೆ 7ರಿಂದ ವೇದಮೂರ್ತಿ ಬೋಳಂತೋಡಿ ರಾಮಭಟ್ ಅವರ ನೇತೃತ್ವದಲ್ಲಿ ಸತ್ಯಗಣಪತಿಪೂಜೆ, 8ಕ್ಕೆ ಮೀಯಪದವು ಅಯ್ಯಪ್ಪ ಭಜನಾ ಮಂದಿರ ತಂಡದಿಂದ ಭಜನಾ ಕಾರ್ಯಕ್ರಮ, 10ಕ್ಕೆ ಮಹಾಪೂಜೆ ಜರಗಲಿದೆ.
ಸೆ.4ರಂದು ಬೆಳಿಗ್ಗೆ 11ಕ್ಕೆ ಶ್ರೀ ದೇವಿ ನಿತ್ಯಾನಂದ ಭಜನಾ ಮಂದಿರ ಕುಳೂರು ಚಾರ್ಲ ತಂಡದಿಂದ ಭಜನಾ ಕಾರ್ಯಕ್ರಮ, 1ಕ್ಕೆ ಮಹಾಪೂಜೆ, ಅಪರಾಹ್ನ 3.00ಕ್ಕೆ ವಿಸರ್ಜನಾ ಮೆರವಣಿಗೆ ಜರಗಲಿದೆ ಎಂದು ಭಜನಾ ಸಂಘ ಪ್ರಕಟಣೆ ತಿಳಿಸಿದೆ.