HEALTH TIPS

ಅಣೆಕಟ್ಟು ಸುರಕ್ಷತಾ ಮಸೂದೆ 2019: ಲೋಕಸಭೆಯಲ್ಲಿ ಅಂಗೀಕಾರ

          
       ನವದೆಹಲಿ: ದೇಶಾದ್ಯಂತ ನಿರ್ದಿಷ್ಟ  ಅಣೆಕಟ್ಟುಗಳಿಗೆ ಕಣ್ಗಾವಲು, ತಪಾಸಣೆ, ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಸಾಂಸ್ಥಿಕ ಕಾರ್ಯವಿಧಾನವನ್ನು ರಚಿಸುವ ಅಣೆಕಟ್ಟು ಸುರಕ್ಷತಾ ಮಸೂದೆ 2019 ಲೋಕಸಭೆಯಲ್ಲಿ ಶುಕ್ರವಾರ ಅಂಗೀಕಾರವಾಯಿತು.
     15 ಮೀಟರ್ ಗಿಂತ ಹೆಚ್ಚು ಅಥವಾ 10 ಮೀಟರ್ ನಿಂದ 15 ಮೀಟರ್ ವರೆಗಿನ ದೇಶದಲ್ಲಿನ ನಿರ್ದಿಷ್ಟ ಅಣೆಕಟ್ಟುಗಳಿಗೆ ಮಾತ್ರ ಈ ಮಸೂದೆ ಅನ್ವಯವಾಗಲಿದ್ದು, ರಾಜ್ಯಗಳ ಅಧಿಕಾರವನ್ನು ಕಸಿಯುವ  ಉದ್ದೇಶವನ್ನು ಹೊಂದಿಲ್ಲ ಎಂಬ ಕೇಂದ್ರಸರ್ಕಾರದ ಪ್ರತಿಪಾದನೆಯೊಂದಿಗೆ ಈ ಮಸೂದೆ ಅಂಗೀಕರಿಸಲ್ಪಟ್ಟಿತು.
     ಅಣೆಕಟ್ಟು ಸುರಕ್ಷತಾ ಮಸೂದೆ 2019 ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಈ ಮಸೂದೆ ಮೂಲಕ ರಾಜ್ಯಗಳ ಅಧಿಕಾರವನ್ನು ಕಸಿಯುವ ಉದ್ದೇಶವಿಲ್ಲಾ, ನೀರು ರಾಜ್ಯಗಳ ವಿಚಾರವಾಗಿದೆ. 2016ರಲ್ಲಿ ಈ ಮಸೂದೆ ಬಗ್ಗೆ ರಾಜ್ಯಗಳೊಂದಿಗೆ ಸಮಾಲೋಚಿಸಲಾಗಿದ್ದು, 2010ರ ಕರಡು ಗಿಂತಲೂ ಈ ಮಸೂದೆ ಉತ್ತಮ ಎಂದು ಬಹುತೇಕ ರಾಜ್ಯಗಳು ಒಪ್ಪಿವೆ ಎಂದರು.
       ಪ್ರಸ್ತಾವಿತ ಕಾನೂನಿನಿಂದ ಅಣೆಕಟ್ಟುಗಳನ್ನು ಕೇಂದ್ರ ಸರ್ಕಾರ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಲೀ ಅಥವಾ ಅದರಿಂದ ವಿದ್ಯುತ್ ಉತ್ಪಾದನೆ ಮಾಡುವುದಾಗೀ ಮಾಡುವ ಉದ್ದೇಶವಿಲ್ಲ, ಕೇಂದ್ರೀಯ ಜಲ ಆಯೋಗದ ಅಧಿಕಾರಿಗಳು ಅಥವಾ ಕೇಂದ್ರ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
    ದೇಶದಲ್ಲಿನ 5,754 ಜಲಾಶಯಗಳಲ್ಲಿ 293  ಜಲಾಶಯಗಳು 100ಕ್ಕೂ ಹೆಚ್ಚಿನ  ವರ್ಷದ ಹಳೆಯದಾದ ಜಲಾಶಯಗಳಾಗಿವೆ. ಶೇ. 25 ರಷ್ಟು ಜಲಾಶಯಗಳು 50 ರಿಂದ 100 ವರ್ಷ ತುಂಬಿವೆ. ಶೇ, 80 ರಷ್ಟು ಜಲಾಶಯಗಳಿಗೆ 25ಕ್ಕೂ ಹೆಚ್ಚಿನ ವರ್ಷಗಳಾಗಿವೆ ಶೇಕಡಾ 92ಕ್ಕೂ ಹೆಚ್ಚಿನ ಜಲಾಶಯಗಳು ಅಂತರ್ ರಾಜ್ಯ ನದಿ ಜಲಾನಯನ ಪ್ರದೇಶಗಳಲ್ಲಿ ಬರುತ್ತವೆ ಎಂದು ಮಾಹಿತಿ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries