ಕಾಸರಗೋಡು: ಈ ವರ್ಷದ ಓಣಂ ಪರೀಕ್ಷಾ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಆಗಸ್ಟ್ 26ರಂದು ಪರೀಕ್ಷೆ ಆರಂಭಗೊಳ್ಳಲಿದ್ದು, 30ರ ವರೆಗೆ ನಡೆಯಲಿದೆ.
ಒಂದರಿಂದ 4ರ ವರೆಗೆ ಮತ್ತು 9ರಿಂದ 12ನೇ ತರಗತಿ ವರೆಗೆ ಬೆಳಿಗ್ಗೆ, 5ರಿಂದ ಎಂಟರ ವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಪರೀಕ್ಷೆ ನಡೆಯಲಿದೆ. ಎಲ್‍ಪಿ ಶಾಲಾ ಮಕ್ಕಳಿಗೆ ಆ. 30ರಿಂದ ಸೆಪ್ಟಂಬರ್ 5ರ ವರೆಗೆ ಪರೀಕ್ಷೆ ನಡೆಯಲಿದೆ.