ಮಂಜೇಶ್ವರ: ವರ್ಕಾಡಿ ಪಾವಳದ ಸಂತೋಷ್ ಫ್ರೆಂಡ್ಸ್ ಕ್ಲಬ್, ಸಂತೋಷ್ ಪ್ರೆಂಡ್ಸ್ ಕ್ಲಬ್ ಲೈಬ್ರರಿ ಹಾಗೂ ಪ್ರೀತಿ ಮಹಿಳಾ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜರಗಿದ 27ನೇ ವರ್ಷದ ಮೊಸರು ಕುಡಿಕೆ ಮಹೋತ್ಸವವನ್ನು ಕವಿ,ಸಾಹಿತಿ, ಪತ್ರ ಕರ್ತ, ಕೇರಳ ತುಳು ಅಕಾಡೆಮಿಯ ಸದಸ್ಯ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಉದ್ಘಾಟಿಸಿದರು.
ಈ ಸಂದರ್ಭ ಲೈಬ್ರರಿಯ ಸದಸ್ಯ ಚೇತನ್ ವರ್ಕಾಡಿ ರಚಿಸಿದ ಪೊಸಬಿದೆ ಎಂಬ ತುಳು ಗಾದೆಗಳ ಪುಸ್ತಕದ ಬಿಡುಗಡೆಯನ್ನು ಜಾನಪದ ವಿದ್ವಾಂಸ, ಕವಿ, ಸಾಹಿತಿ, ಸೈಂಟ್ ಅಲೋಸಿಯಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಗಣೇಶ್ ಅಮೀನ್ ಸಂಕಮಾರ್ ನಿರ್ವಹಿಸಿದರು. ಸಮಾರಂಭದಲ್ಲಿ ಖ್ಯಾತ ಹೃದಯ ರೋಗ ತಜ್ಞ, ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಅಮಿತ್ ಕಿರಣ್ ರವರನ್ನು ಸನ್ಮಾನಿಸಲಾಯಿತು. ಮಂಗಳೂರಿಲ್ಲಿ ಹೋಮ್ ಗಾರ್ಡ್ ಸೇವೆ ಸಲ್ಲಿಸುತ್ತಿರುವ ಹಮೀದ್ ರವರ ಸೇವಾ ದಕ್ಷತೆಯನ್ನು ಗಮನಿಸಿ ಗೌರವ ಸಮರ್ಪಣೆ ಮಾಡಲಾಯಿತು. ಯುವ ಕವಿ ಚೇತನ್ ವರ್ಕಾಡಿಯವರನ್ನು ಮೌನಕೋಗಿಲೆ ಬಳಗದವರ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಅತಿಥಿಗಳಾಗಿ ಗ್ರಾ.ಪಂ. ಸದಸ್ಯೆ ಪೂರ್ಣಿಮಾ.ಎಸ್. ಬೇರಿಂಜ, ಬಂಟ್ವಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕಿ ಡಾ. ಅಪರ್ಣಾ ಹರೀಶ್ ಸುಲಾಯ ಒಡ್ಡಂಬೆಟ್ಟು, ಐತ್ತಪ್ಪ ಶೆಟ್ಟಿ ದೇವಂದ ಪಡ್ಪು, ಪ್ರಭಾಕರ ರೈ ಕಲ್ಪಣೆ, ವಿವೇಕಾನಂದ ಶೆಟ್ಟಿ ವರ್ಕಾಡಿ, ಪ್ರಭಾಕರ ಸುಂಕದಕಟ್ಟೆ, ಸತೀಶ್ ಬದಿಯಾರ್ ಉಪಸ್ಥಿತರಿದ್ದು ಶುಭಹಾರೈಸಿದರು. ಸಂತೋಷ್ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಮೋಹನ ಕೆ ಅಧ್ಯಕ್ಷತೆ ವಹಿಸಿದ್ದರು. ಪ್ರೀತಿ ಮಹಿಳಾ ಸಮಾಜದ ಅಧ್ಯಕ್ಷೆ ಪವಿತ್ರ ಹರೀಶ್, ಲೈಬ್ರರಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪಾವಳ ಉಪಸ್ಥಿತರಿದ್ದರು. ಕಿಶೋರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಿಜಯ ಕುಮಾರ್ ಪಾವಳ ಸ್ವಾಗತಿಸಿ, ಲಿಖಿತ್ ರಾಜ್ ವಂದಿಸಿದರು.