ನವದೆಹಲಿ: ಚಂದ್ರಯಾನ-2ರಲ್ಲಿ ಅಳವಡಿಸಲಾಗಿರುವ ಎಲ್ -14 ಕ್ಯಾಮರಾದಿಂದ ಸೆರೆ ಹಿಡಿಯಲ್ಪ ಭೂಮಿಯ ಐದು ಚಿತ್ರಗಳನ್ನು ಇಸ್ರೋ ಟ್ವೀಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ಹಂಚಿಕೊಂಡಿದೆ.
ಬಾಹ್ಯಾಕಾಶದಿಂದ ಭೂಮಿಯಿಂದ ಸೆರೆಹಿಡಿಯಲ್ಪ ಚಿತ್ರಗಳನ್ನು ಟ್ವೀಟ್ ಮಾಡಿರುವ ಇಸ್ರೋ, ಚಂದ್ರಯಾನ-2 ಎಲ್ 14 ಕ್ಯಾಮರಾದಿಂದ ತೆಗೆಯಲಾಗಿರುವ ಸುಂದರವಾದ ಭೂಮಿಯ ಚಿತ್ರಗಳೆಂದು ತಿಳಿಸಿದೆ.
ಭಾರತದ ಚಂದ್ರಯಾನ ಉಪಗ್ರಹ-2 ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ . ನಾಲ್ಕನೇ ಆರ್ಬಿಟರ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಪೋಟೋಗಳನ್ನು ಭೂಮಿಗೆ ರವಾನಿಸಿದೆ. ಐದನೇ ಆರ್ಬಿಟರ್ ಆಗಸ್ಟ್ 6 ರಂದು 2-30ರಿಂದ 3-30 ರ ನಡುವೆ ಕಾರ್ಯ ಆರಂಭಿಸಲಿದೆ ಎಂದು ಇಸ್ರೋ ಹೇಳಿದೆ.
ಆರ್ಬಿಟರ್ , ಲ್ಯಾಂಡರ್, ವಿಕ್ರಮ್, ರೋವರ್ ಪರಿಕರಗಳನ್ನು ಹೊತ್ತ ಜಿಎಸ್ ಎಲ್ ವಿ ಮಾರ್ಕ್ -111 ವಾಹಕ ಜುಲೈ 22 ರಂದು ನಭದತ್ತ ಚಿಮ್ಮಿತ್ತು.