ಬದಿಯಡ್ಕ: ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಕೃಪಾಶೀರ್ವಾದಗಳೊಂದಿಗೆ ಎಡನೀರು ಮಠದ ಶ್ರೀ ಕೃಷ್ಣ ರಂಗ ಮಂಟಪದಲ್ಲಿ 32 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.2 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಿಗ್ಗೆ 7 ರಿಂದ ಗಣಪತಿ ಹವನ, ಮಹಾಗಣಪತಿ ವಿಗ್ರಹ ಪ್ರತಿಷ್ಠೆ, 8.30 ಕ್ಕೆ ಧ್ವಜಾರೋಹಣ, 9 ರಿಂದ ಭಕ್ತಿ ಸಂಕೀರ್ತನೆ, 10 ರಿಂದ ಧಾರ್ಮಿಕ ಸಭೆ ನಡೆಯಲಿದೆ. ಸಭೆಯಲ್ಲಿ ಕುಂಜರಕಾನ ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು. ಡಾ.ಶಂಕರ ಪಾಟಾಳಿ ಬದಿಯಡ್ಕ ಧಾರ್ಮಿಕ ಭಾಷಣ ಮಾಡುವರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವೇಣುಗೋಪಾಲ್ ಮಾಸ್ತರ್ ಎಡನೀರು ಉಪಸ್ಥಿತರಿರುವರು. 11 ರಿಂದ ವಿವಿಧ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ 12 ಕ್ಕೆ ಭಜನೆ, 12.50 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, ಸಂಜೆ 4 ಕ್ಕೆ ನೃತ್ಯವೈವಿಧ್ಯ, ಸಂಜೆ 6 ಕ್ಕೆ ಧ್ವಜಾವರೋಹಣ, 6.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ವೈಭವದ ಶೋಭಾಯಾತ್ರೆ, ಜಲಸ್ಥಂಭನ ನಡೆಯಲಿದೆ.