HEALTH TIPS

ಗಲಿಬಿಲಿ ಬೇಡ=ಆರ್ಟಿಕಲ್ 35ಎ ಎಂದರೇನು=ಗೊತ್ತಿರಲಿ ಒಂದಷ್ಟು= ಮುಂದೇನು?

       
      ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಆರ್ಟಿಕಲ್ 35ಎ, 370 ನ್ನು ರದ್ದುಗೊಳಿಸಿರುವ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
1954 ರಲ್ಲಿ ರಾಷ್ಟ್ರಪತಿಗಳ ಆದೇಶದ ಮೂಲಕ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಗಿತ್ತು. ಈಗ ಅಮಿತ್ ಶಾ-ಮೋದಿ- ದೋವಲ್ ಜೋಡಿ ಈಗ ರಾಷ್ಟ್ರಪತಿಗಳ ಮೂಲಕವೇ ರದ್ದುಗೊಳಿಸಿದೆ.
    ಆರ್ಟಿಕಲ್ 35ಎ, 370 ಅಂದರೇನು? ಇಲ್ಲಿದೆ ಮಾಹಿತಿ:
      ಆರ್ಟಿಕಲ್ 35ಎ, 370 ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ರಾಜ್ಯದ ಹೊರಗಿನವರು ಯಾರೂ ಸಹ ಅಲ್ಲಿ ಭೂಮಿ ಖರೀದಿಸುವಂತಿಲ್ಲ
ರಾಜ್ಯದ ವಿಧಾನಸಭೆಗೆ ರಾಜ್ಯದ ಶಾಶ್ವತ ನಿವಾಸಿಗಳನ್ನು ಗುರುತಿಸುವ ಹಕ್ಕು ಇದೆ. ಶಾಶ್ವತ ನಿವಾಸಿಗಳಿಗಷ್ಟೇ ಮತದಾನ, ಸರ್ಕಾರಿ ನೌಕರಿಯ ಹಕ್ಕು
ರಾಜ್ಯದ ಹೊರಗಿನವರನ್ನು ವಿವಾಹವಾಗುವ ಮಹಿಳೆಗೆ ಈ ವಿಶೇಷ ಸೌಲಭ್ಯ ಅನ್ವಯವಿಲ್ಲ.
      ಆದರೆ ಜಮ್ಮು-ಕಾಶ್ಮೀರದ ಪುರುಷ ಹೊರ ರಾಜ್ಯದ ಸ್ತ್ರಿ?ಯನ್ನು ವಿವಾಹವಾದರೆ ಆತನ ಹಕ್ಕು ಅಬಾಧಿತ. ಜೊತೆಗೆ ಆತನ ಪತ್ನಿಗೂ ಈ ಎಲ್ಲಾ ಹಕ್ಕುಗಳು ಪ್ರಾಪ್ತವಾಗುತ್ತವೆ. ವಿವಾಹ, ಆಸ್ತಿ ಖರೀದಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ವಿಚಾರದಲ್ಲಿ ಆರ್ಟಿಕಲ್ 370, 35ಎ ಮೂಲಕ ತಾರತಮ್ಯ
ದೇಶಕ್ಕೇ ಒಂದು ಕಾನೂನಾಗಿದ್ದರೆ ಜಮ್ಮು-ಕಾಶ್ಮೀರಕ್ಕೇ ಪ್ರತ್ಯೇಕ ಕಾನೂನು, ಸಂವಿಧಾನವಿತ್ತು.
     ಆರ್ಟಿಕಲ್ 370 ರದ್ದುಗೊಂಡಿದೆ. ದೇಶದ ಇತರ ರಾಜ್ಯಗಳಿಗೂ ಅನ್ವಯವಾಗುವ ಕಾನೂನು, ಸಂವಿಧಾನ ಈಗ ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗುತ್ತದೆ. ಇನ್ನು ಮುಂದೆ ಜಮ್ಮು-ಕಾಶ್ಮೀರ ಭಾರತದ ಇತರ ಕೇಂದ್ರಾಡಳಿತ ಪ್ರದೇಶಗಳಂತೆಯೇ ಇರಲಿದೆ.
  ಆರ್ಟಿಕಲ್ 370 ಗೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಹೈಕೋರ್ಟ್ 2015 ರ ಅಕ್ಟೋಬರ್ ರಂದು ನೀಡಿದ್ದ ಆದೇಶದ ಪ್ರಕಾರ ಅನುಚ್ಛೇದ 3 ರ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ನಿರ್ಧರಿಸುವ ಹಕ್ಕು ಸಾಂವಿಧಾನಿಕ ಶಾಸನ ಸಭೆಗೆ ಇದೆ. ಆದರೆ ವಿಧಾನಸಭೆ ವಿಸರ್ಜನೆಯಾಗಿದೆ. ವಿಸರ್ಜನೆಯಾದ ಸಂದರ್ಭದಲ್ಲಿ ಆರ್ಟಿಕಲ್ 370 ನೆ ವಿಧಿಗೆ ಸಂಬಂಧಿಸಿದಂತೆ ಯಾವುದೇ ನಿರ್ಣಯವನ್ನೂ ಕೈಗೊಂಡಿರಲಿಲ್ಲ.
     ಕಾಶ್ಮೀರ ವಿಧಾನಸಭೆಯಲ್ಲಿ 370 ನ್ನು ರದ್ದುಗೊಳಿಸುವ ಮಸೂದೆಯನ್ನು ಅಂಗೀಕರಿಸದೇ, ವಿಶೇಷ ಸ್ಥಾನಮಾನ ರದ್ದು ಸಾಧ್ಯವಿಲ್ಲ, ಈ ಹಂತದಲ್ಲಿ ಕಾನೂನು ತೊಡಕು ಎದುರಾಗುತ್ತದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಯಾವ ರಾಷ್ಟ್ರಪತಿಗಳ ಹುದ್ದೆಯ ಮೂಲಕ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತೋ ಈಗ ಅದೇ ರಾಷ್ಟ್ರಪತಿಗಳ ಅಂಕಿತದ ಮೂಲಕ ಆರ್ಟಿಕಲ್ 370 ಯನ್ನು ರದ್ದುಗೊಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries