HEALTH TIPS

ಪ್ರಧಾನಿಯಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ-370 ನೇ ವಿಧಿ ರದ್ದು ಸರ್ದಾರ್ ಪಟೇಲ್, ವಾಜಪೇಯಿ ಕನಸನ್ನು ನನಸಾಗಿಸಿದೆ: ಮೋದಿ

 
      ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಇಂದು ಸಂಜೆ ಮಾತನಾಡಿದ್ದಾರೆ.
     "ನಾನು ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಇಡೀ ರಾಷ್ಟ್ರದ ಜನರನ್ನು ಅಭಿನಂದಿಸುತ್ತೇನೆ. ಕೆಲವು ವಿಷಯಗಳು ಜೀವಂತವಿರುವವರೆಗೂ  ಅವು ಎಂದಿಗೂ ಬದಲಾಗುವುದಿಲ್ಲ ಅಥವಾ ದೂರ ಹೋಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. 370 ನೇ ವಿಧಿ ಇದೇ ರೀತಿಯದಾಗಿತ್ತು." ಎಂದು ಪ್ರಧಾನಿ ಹೇಳಿದರು.
     "ಸರ್ದಾರ್ ಪಟೇಲ್, ಬಾಬಾ ಸಾಹೇಬ್ ಅಂಬೇಡ್ಕರ್, ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ, ಅಟಲ್ ಜೀ ಮತ್ತು ಕೋಟ್ಯಂತರ ದೇಶಭಕ್ತರ ಕನಸು ಈಡೇರಿದೆ. ನಾವು ಒಂದು ರಾಷ್ಟ್ರವಾಗಿ, ಒಂದು ಕುಟುಂಬವಾಗಿ, ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್‍ನ ಸಹೋದರರು ಮತ್ತು ಸಹೋದರಿಯರು ಅನೇಕ ಹಕ್ಕುಗಳಿಂದ ವಂಚಿತರಾಗಿದ್ದಾರೆ ಮತ್ತು ಅವರ ಅಭಿವೃದ್ಧಿಗೆ ಇದು ಒಂದು ದೊಡ್ಡ ಅಡಚಣೆ ಇದ್ದಿತ್ತು, ಇದೀಗ ವಿಶೇಷ ಸ್ಥಾನಮಾನ ರದ್ದು ಆಗಿರುವುದರಿಂದ ಅವರೂ ದೇಶದ ಉಳಿದ ರಾಜ್ಯಗಳ ನಾಗರಿಕರಂತೆ ಅಭಿವೃದ್ದಿಯ ಹಾದಿಯಲ್ಲಿ ಮುಂದುವರಿಯಬಹುದು." "ಮೋದಿ ಹೇಳಿದರು.
    "ವಿಶೇಷ ಸ್ಥಾನಮಾನದ ಕಾರಣ, ಜಮ್ಮು ಮತ್ತು ಕಾಶ್ಮೀರಕ್ಕೆ ನಿಜವಾಗಿ ಸಿಗಬೇಕಿದ್ದ ಅಭಿವೃದ್ಧಿ ಅವಕಾಶವನ್ನು ಪಡೆಯಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು. ಈಗ, ಜಮ್ಮು ಮತ್ತು ಕಾಶ್ಮೀರಕ್ಕೂ ಭಾರತದ ಉಳಿದ ಭಾಗಗಳಂತೆ ಅಭಿವೃದ್ಧಿಯ ಫಲ ಸಿಗಲಿದೆ" ಎಂದು ಪ್ರಧಾನಿ ಹೇಳಿದರು.
    ಜಮ್ಮು ಕಾಶ್ಮೀರ ಜನರು ಇತರ ರಾಜ್ಯಗಳಿಗೆ ಅನ್ವಯಿಸುವ ಕಾನೂನುಗಳು ಮತ್ತು ಯೋಜನೆಗಳ ಪ್ರಯೋಜನಗಳಿಂದ ವಂಚಿತರಾಗಿದ್ದರು. ಈಗ ಅವರು ಇತರ ರಾಜ್ಯಗಳ ಜನರಂತೆ ಆರೋಗ್ಯ ಮತ್ತು ಶಿಕ್ಷಣದ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ" ಎಂದು ಪ್ರಧಾನಿ ಹೇಳಿದರು. ಜಮ್ಮು ಮತ್ತು ಕಾಶ್ಮೀರವನ್ನು ನೇರವಾಗಿ ಕೇಂದ್ರ ಆಡಳಿತದಲ್ಲಿ ತರುವ ಬಗೆಗೆ ಚೆನ್ನಾಗಿ ಯೋಚಿಸಲಾಗಿದೆ. ಮತ್ತು ಇದು ಸ್ವಲ್ಪ ಸಮಯದವರೆಗೆ ಮುಂದುವರಿಯಲಿದೆ. ರಾಜ್ಯಪಾಲರ ಆಡಳಿತವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೆ ತಂದಾಗಿನಿಂದ, ರಾಜ್ಯದ ಆಡಳಿತ ನಿರ್ವಾಹಕರು ಕೇಂದ್ರದೊಡನೆ ನೇರ ಸಂಪರ್ಕದಲ್ಲಿದ್ದಾರೆ., ಇದರಿಂದಾಗಿ ಉತ್ತಮ ಆಡಳಿತದ ಪರಿಣಾಮಗಳನ್ನು ನಾವಿಂದು ಕಾಣುತ್ತಿದ್ದೇವೆ. 370 ನೇ ವಿಧಿ ಜಮ್ಮು, ಕಾಶ್ಮೀರ ಮತ್ತು ಲಡಾಖ್ ಜನರ ಮೇಲೆ ಹೇಗೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬುದರ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಮತ್ತು ಆಶ್ಚರ್ಯಕರ ಸಂಗತಿಯೆಂದರೆ, ಈ ವಿಧಿಯು ಜನರಿಗೆ ಹೇಗೆ ಪ್ರಯೋಜನವನ್ನು ನೀಡಿತು ಎಂಬುದನ್ನು ಯಾರೂ ನಿಜವಾಗಿಯೂ ಹೇಳಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು.
     ಜಮ್ಮು ಮತ್ತು ಕಾಶ್ಮೀರದ ಜನರಿಗೆ ತಮ್ಮ ಸ್ಥಳೀಯ ಪ್ರತಿನಿಧಿಗಳನ್ನು ಮೊದಲಿನಂತೆಯೇ ಆಯ್ಕೆ ಮಾಡುವುದಕ್ಕೆ ಅವಕಾಶವಿರಲಿದೆ ಎಂದು ಮೋದಿ ಹೇಳಿದ್ದಾರೆ.
   "ಅವರು ಮುಕ್ತ ಮತ್ತು ನ್ಯಾಯಯುತವಾದ ಪಂಚಾಯತ್ ಚುನಾವಣೆಗಳನ್ನುಕಾಣಲಿದ್ದಾರೆ. ಅದೇ ರೀತಿ ವಿಧಾನಸಭಾ ಚುನಾವಣೆಗಳು ಸಹ ನಡೆಯಲಿವೆ. ಎರಡು-ಮೂರು ದಶಕಗಳಿಂದ ಬಾಕಿ ಇರುವ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ ಅನ್ನು ನೇಮಕ ಮಾಡುವಂತೆ ನಾನು ರಾಜ್ಯಪಾಲರನ್ನು ಒತ್ತಾಯಿಸುತ್ತೇನೆ" ಎಂದು ಪ್ರಧಾನಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಜನರಿಗೆ ಶೀಘ್ರದಲ್ಲೇ ಮುಕ್ತ ಮತ್ತು ನ್ಯಾಯಯುತ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶ ದೊರಕಲಿದೆ ಎಂದು ನಾನು ಭರವಸೆ ನೀಡುತ್ತೇನೆ" ಎಂದು ಅವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries