ಕುಂಬಳೆ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು 370, 35 ಎ ವಿಧಿಯನ್ನು ರದ್ದುಗೊಳಿಸಿ ಜಮ್ಮು, ಕಾಶ್ಮೀರ, ಲಡಾಕ್‍ನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಐತಿಹಾಸಿಕ ಕ್ಷಣದ ಸಂಭ್ರಮಾಚರಣೆ ಕುಂಬಳೆ ಪೇಟೆಯಲ್ಲಿ ಸಂಘ ಪರಿವಾರದ ವತಿಯಿಂದ ವಿಜಯೋತ್ಸವದ ಮೂಲಕ ಸೋಮವಾರ ನಡೆಯಿತು.
ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ ಶೆಟ್ಟಿ ಪೂಕಟ್ಟೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕುಂಬಳೆ ಪಂಚಾಯತಿ ಬಿಜೆಪಿ ಅಧ್ಯಕ್ಷರಾದ ಶಂಕರ್ ಆಳ್ವ, ಮಂಡಲ ಪ್ರಧಾನ ಕಾರ್ಯದರ್ಶಿ ಮುರಳೀಧರ ಯಾದವ್ ನಾಯ್ಕಾಪು, ಮಣಿಕಂಠ ರೈ ಪಟ್ಲ, ನ್ಯಾಯವಾದಿ ಸದಾನಂದ ಕಾಮತ್, ಸುಜಿತ್ ರೈ, ಪುಷ್ಪಲತಾ, ಸ್ನೇಹಲತಾ, ಸುಲೋಚನಾ, ಸಂಘ ಪರಿವಾರ ನೇತಾರರಾದ ದಿನೇಶ್, ಸಂದೀಪ್ ಗಟ್ಟಿ, ಮಧುಸೂದನ್ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧಾಕರ ಕಾಮತ್ ಸ್ವಾಗತಿಸಿ, ಸುರೇಶ ಶಾಂತಿಪಳ್ಳ ವಂದಿಸಿದರು.