ಕಾಸರಗೋಡು: ರಸ್ತೆ ಸುರಕ್ಷೆ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಜಂಟಿ ವತಿಯಿಂದ ಆ.5ರಿಂದ 31 ವರೆಗೆ ಕಡ್ಡಾಯ ವಾಹನ ತಪಾಸಣೆ ಮತ್ತು ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
ರೋಡ್ ಸೇಫ್ಟಿ ಆ್ಯಕ್ಷನ್ ಪ್ಲಾನ್ ಆಧಾರದಲ್ಲಿ ರಾಜ್ಯಾದ್ಯಂತ ನಡೆಯುವ ಕ್ರಮಗಳ ಅಂಗವಾಗಿ ಜಿಲ್ಲೆಯಲ್ಲೂ ಈ ಚಟುವಟಿಕೆಗಳು ಜರಗಲಿವೆ.
ಈ ಸಂಬಂಧ ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಅವರು ಅಧ್ಯಕ್ಷರಾಗಿರುವ ರೋಡ್ ಸೇಫ್ಟಿ ಆ್ಯಕ್ಷನ್ ಪ್ಲಾನ್ ಸಮಿತಿ ಸಭೆ ಶುಕ್ರವಾರ ನಡೆದಿದ್ದು, ಈ ಕುರಿತು ಚರ್ಚಿಸಲಾಯಿತು. ಆ.5ರಿಂದ 31 ವರೆಗೆ ಒಂದೊಂದು ರೀತಿಯ ಕಾನೂನು ಉಲ್ಲಂಘನೆಗಳನ್ನು ಮುಂಗಡವಾಗಿ ನಿಗದಿಪಡಿಸಿ ಆಯಾ ದಿನಗಳಲ್ಲಿ ಕಠಿಣ ಕಾನೂನು ಕ್ರಮಗಳ ಸಹಿತ ವ್ಯಾಪಕ ತಪಾಸಣೆಗಳನ್ನು ನಡೆಸಲಾಗುವುದು ಎಂದು ಸಬೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ„ಕಾರಿ ತಿಳಿಸಿದರು.
ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧಾರಣೆ ನಗರ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರೂ ಹೆಲ್ಮೆಟ್ ಧಾರಣೆ ಕಡ್ಡಾಯಗೊಳಿಸಲಾಗಿದೆ. ಶೀಘ್ರದಲ್ಲೇ ಈ ಕುರಿತು ಜನಜಾಗೃತಿ ಕಾರ್ಯಕ್ರಮವೂ ನಡೆಯಲಿದೆ. ಕಾರಿನಲ್ಲಿ ಹಿಂಬದಿ ಸೀಟಿನ ಪ್ರಯಾಣಿಕರೂ ಸೀಟು ಬೆಲ್ಟ್ ಧರಿಸಿದ್ದಾರೆಯೋ ಎಂದು ತಪಾಸಣೆ ನಡೆಸಲಾಗುವುದು. ಚಾಲಕರಿಗೆ, ಸಾರ್ವಜನಿಕರಿಗೆ ಉತ್ತಮ ವಾಹನ ಚಾಲನೆ ಸಂಸ್ಕಾರ ಮೂಡಿಸುವಲ್ಲಿ ಜಾಗೃತಿ ತರಗತಿ ನಡೆಸಲು ಸಭೆ ನಿರ್ಧಾರ ಕೈಗೊಂಡಿದೆ. ಹಾದಿಯಲ್ಲಿ ಅಗತ್ಯವಿರುವಲ್ಲೆಲ್ಲ ದಾರಿದೀಪ ಸ್ಥಾಪಿಸಲು ಸಂಬಂಧಪಟ್ಟವರಿಗೆ ಆದೇಶ ನೀಡಲಾಗಿದೆ.
ಹಾದಿ ಬದಿ ವ್ಯಾಪಾರಿಗಳ ತೆರವು : ರಸ್ತೆ ಬದಿ ಅಕ್ರಮವಾಗಿ ವ್ಯಾಪಾರ ನಡೆಸುತ್ತಿರುವ ಮಂದಿ ಆ.16ರ ಮುಂಚಿತವಾಗಿ ತೆರವುಗೊಳ್ಳಬೇಕು ಎಂದು ಶುಕ್ರವಾರ ನಡೆದ ರಸ್ತೆ ಸುರಕ್ಷೆ ಸಭೆ ಮುನ್ಸೂಚನೆ ನೀಡಿದೆ.
ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ರಸ್ತೆ ಇತ್ಯಾದಿಗಳ ಬದಿ ಕಾನೂನು ಉಲ್ಲಂಘಿಸಿ ವ್ಯಾಪಾರ ನಡೆಸುವವರು ಸ್ವಪ್ರೇರಣೆಯಿಂದ ಈ ಅವ„ಯಲ್ಲಿ ತೆರವುಗೊಳ್ಳಬೇಕು. ಇಲ್ಲವಾದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಕಾಲ್ನಡಿಗೆ ಹಾದಿಯಲ್ಲಿ ವ್ಯಾಪಾರ ನಡೆಸುವವರ ವಿರುದ್ಧ ಕೈಗೊಳ್ಳುವ ಕ್ರಮದ ಅಂಗವಾಗಿಯೇ ಈ ಕುರಿತೂ ಕ್ರಮ ನಡೆಸಲಾಗುವುದು ಎಂದು ಸಭೆ ಹೇಳಿದೆ.
ಹೆಚ್ಚುವರಿ ಅಪಘಾತ ನಡೆಯುವ 15 ಪ್ರದೇಶಗಳನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸಲಾಗಿದೆ. ಇಲ್ಲಿ ಅಗತ್ಯದ ಸಂಜ್ಞಾ ಫಲಕ (ಸೈನ್ ಬೋರ್ಡ್) ಗಳನ್ನು ಸ್ಥಾಪಿಸಲಾಗುವುದು ಮತ್ತು ರಸ್ತೆ ಸುರಕ್ಷೆ ಮಾನದಂಡಗಳನ್ನು ಸ್ವೀಕರಿಸಲಾಗುವುದು. ಈಗಾಗಲೇ ಸ್ಥಾಪಿಸಿರುವ ಫಲಕಗಳಿಗೆ ಅಡ್ಡವಾಗಿ ಬೆಳೆದ ಮರದ ಗೆಲ್ಲುಗಳು ಇತ್ಯಾದಿಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ಆ.14ರಿಂದ ಪರೀಕ್ಷಾರ್ಥ ಟ್ರಾಫಿಕ್ ಪರಿಷ್ಕರಣೆ : ಕೆ.ಎಸ್.ಟಿ.ಪಿ. ರಸ್ತೆಯಲ್ಲಿ ಪರೀಕ್ಷಾರ್ಥ ಲೈನ್ ಟ್ರಾಫಿಕ್ ಪರಿಷ್ಕರಣೆ ಆ.14ರಿಂದ 16 ವರೆಗೆ ನಡೆಯಲಿದೆ ಎಂದು ಜಿಲ್ಲಾ„ಕಾರಿ ತಿಳಿಸಿದರು. ಇದರ ಅಂಗವಾಗಿ ದೊಡ್ಡ ವಾಹನಗಳಿಗೆ ಸಣ್ಣವಾಹನಗಳಿಗೆ ಪ್ರತ್ಯೇಕ ಬದಿ ನಿಗದಿ ಪಡಿಸಿ ಸಂಚಾರ ನಿಯಂತ್ರಿಸಲಾಗುವುದು. ಇದು ಯಶಸ್ವಿಯಾದಲ್ಲಿ ಜಿಲ್ಲೆಯ ಇತರ ಕಡೆಗಳಲ್ಲೂ ಇದೇ ರೀತಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದವರು ಹೇಳಿದರು.
ಆರ್.ಟಿ.ಒ. ಎಸ್.ಮನೋಜ್, ಅಡೀಶನಲ್ ಎಸ್.ಪಿ.ಪ್ರಷೋಬ್, ಮೋಟಾರು ವಾಹನ ಇನ್ಸ್ ಪೆಕ್ಟರ್(ಎನ್‍ಫೆÇೀರ್ಸ್ ಮೆಂಟ್), ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ನಿಗದಿತ ದಿನಗಳಲ್ಲಿ ವಾಹನ ತಪಾಸಣೆ ಈ ರೀತಿ ಇರುವುದು.
ಆಗಸ್ಟ್ 5ರಿಂದ 7 ವರೆಗೆ -ಸೀಟ್ ಬೆಲ್ಟ್, ಹೆಲ್ಮೆಟ್ ತಪಾಸಣೆ.
8ರಿಂದ 10-ಕಾನೂನು ಉಲ್ಲಂಘಿಸಿ ಪಾಕಿರ್ಂಗ್ ನಡೆಸಿದ ಸಮಬಮಧ ತಪಾಸಣೆ.
11ರಿಂದ 13-ಅತಿವೇಗ.
14ರಿಂದ 16- ಮದ್ಯಪಾನ ನಡೆಸಿ ವಾಹನಚಲಾವಣೆ, ರಸ್ತೆ ನಿಯಮ ಉಲ್ಲಂಘನೆ.
17ರಿಂದ 19-ವಾಹನಚಲಾವಣೆ ವೇಳೆ ಮೊಬೈಲ್ಬಳಕೆ.
20ರಿಂದ 23-ಝೀಬ್ರಾಲೈನ್, ಸಿಗ್ನಲ್ ಉಲ್ಲಂಘನೆ.
24ರಿಂದ 27-ಸ್ಪೀಡ್ ಗವರ್ನರ್, ಅತಿಭಾರ ಹೇರಿಕೆ.
28ರಿಂದ 31 ವರೆಗೆ-ಕೂಲಿಂಗ್ ಪರಿಕರ, ಲೈಟ್ ತಪಾಸಣೆ.