ಕಾಸರಗೋಡು: ಜಿಲ್ಲೆಯಲ್ಲಿ 6 ಮಕ್ಕಳ ಸಹಿತ 26 ಕುಷ್ಠರೋಗಿಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ.ಕೆ.ಕೆ.ಷಾಂಟಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮ ಅಂಬಂಧ ಆಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ಆ.14ರಿಂದ 27 ವರೆಗೆ ಕುಷ್ಠರೋಗಪತ್ತೆ ಕಾರ್ಯಕ್ರಮ ಮತ್ತೆ ಜರುಗಲಿದೆ. ಸಮಾಜದಲ್ಲಿ ಅಳಿದುಳಿದಿರುವ ಕುಷ್ಠರೋಗಿಗಳನನು ಪತ್ತೆ ಮಾಡಿ ಅವರಿಗೆ ಸೂಕ್ತರೀತಿ ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ನಡೆಸಲಾಗುವ ತೀವ್ರಯಜ್ಞ ಕಾರ್ಯಕ್ರಮ ವಾಗಿರುವ "ಅಶ್ವಮೇಧಂ"ನ ದ್ವಿತೀಯ ಹಂತವಾಗಿ ಈ ಚಟುವಟಿಕೆ ನಡೆಯಲಿದೆ. ತರಬೇತಿ ಲಭಿಸಿರುವ ವಯಂಸೇವಕರು ಮನೆ ಮನೆ ಸಂದರ್ಶನನಡೆಸಿ ಕುಷ್ಠರೋಗ ಸಂಬಂಧ ಚರ್ಮರೋಗದ ತಪಾಸಣೆ ನಡೆಸುವರು. ಒಬ್ಬಾಕೆ ಆಶಾ ಕಾರ್ಯಕರ್ತೆ, ಒಬ್ಬ ಪುರುಷ ಸ್ವಯಂಸೇವಕ ಇರುವ ತಂಡ ಈ ಚಟುವಟಿಕೆ ನಡೆಸಲಿದೆ. ಜಿಲ್ಲೆಯಲ್ಲಿ ಈ ನಿಟ್ಟಿನಲ್ಲಿ1634 ತಂಡಗಳು ಸಿದ್ಧವಾಗಿವೆ. ರೋಗ ಸಾಧ್ಯತೆ ಇರುವವರನ್ನು ಸಮಗ್ರ ತಪಾಸಣೆಗೊಳಪಡಿಸುವನಿಟ್ಟಿನಲ್ಲಿ ಹೆಲ್ತ್ ಇನ್ಸ್ ಪೆಕ್ಟರ್ ರು ಮತ್ತು ಪಬ್ಲಿಕ್ ಹೆಲ್ತ್ ನರ್ಸ್ ಗಳಿಗೆ ಹೊಣೆ ನೀಡಲಾಗಿದೆ.
ರೋಗಿಗಳಿಗೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲೂ ಚಿಕಿತ್ಸಾ ಸೌಲಭ್ಯ ಏರ್ಪಡಿಸಲಾಗಿದೆ. ಆರಂಭ ಘಟ್ಟದಲ್ಲೇ ರೋಗ ಪತ್ತೆಮಾಡಿ ಸೂಕ್ತ ಚಿಕಿತ್ಸೆ ಪಡೆದರೆ ವಿಕಲಚೇತನತೆ ಬರದಂತೆ ತಡೆಯುವಿಕೆ ಸಹಿತ ಪೂರ್ಣ ರೂಪದಲ್ಲಿ ರೋಗಮುಕ್ತಿ ಸಾಧ್ಯ. ಜೊತೆಗೆ ಯಾವಹಂತದಲ್ಲಿ ರೋಗ ಪತ್ತೆಯಾದರೂ ಚಿಕಿತ್ಸೆಯಿಂದ ಗುಣಮುಖರಾಗುವ ಸಾಧ್ಯತೆಯೂ ಈಗ ಇದೆ ಎಂದವರು ನುಡಿದರು.
ಜಿಲ್ಲೆಯನ್ನು ಕುಷ್ಠರೋಗ ಮುಕ್ತವನ್ನಾಗಿಸುವ ಮಹಾಯಜ್ಞದಲ್ಲಿ ಎಲ್ಲರೂ ಕೈಜೋಡಿಸುವಂತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ವಿನಂತಿಸಿದರು.
ಆರ್.ಸಿ.ಎಚ್. ಅಧಿಕಾರಿ ಡಾ.ಮುರಳೀಧರ ನಲ್ಲೂರಾಯ, ಬುಡಕಟ್ಟು ಅಭಿವೃದ್ಧಿ ಅಧಿಕಾರಿ ಪಿ.ಟಿ.ಅನಂತಕೃಷ್ಣನ್, ಜಿಲ್ಲಾ ಪರಿಶಿಷ್ಟ ಜಾತಿಕಲ್ಯಾಣ ಅಧಿಕಾರಿ ಮೀನಾರಾಣಿ, ಐ.ಸಿ.ಡಿ.ಎಸ್. ಜಿಲ್ಲಾ ಕರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್, ಸಹಾಯಕಮಾಸ್ ಮೀಡಿಯಾ ಅಧಿಕಾರಿ ಅರುಣ್ ಲಾಲ್ ಎಸ್.ವಿ., ಶಿಕ್ಷಣ ಸಹಾಯಕ ನಿರ್ದೇಶಕ ಕಚೇರಿಯ ಕೃಷ್ಣರಾಜ್, ಪಂಚಾಯತ್ ಸಹಾಯಕ ನಿರ್ದೇಶಕ ಕಚೇರಿಯ ಕೆ.ಮೋಹನನ್ ಮೊದಲಾದವರು ಉಪಸ್ಥಿತರಿದ್ದರು.