ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಅನಿಲ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ - ಎಲ್‍ಪಿಜಿ ದರ ಪ್ರತಿ ಸಿಲಿಂಡರ್‍ಗೆ 62 ರೂಪಾಯಿ 50 ಪೈಸೆ ಕಡಿಮೆಯಾಗಿದೆ.
ಈ ಮೂಲಕ ಕಳೆದ ಎರಡು ತಿಂಗಳ ಅವಧಿಯಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ದರ ಒಟ್ಟು 163 ರೂ ತಗ್ಗಿದೆ. ಬೆಲೆ ಇಳಿಕೆಯಾದ ಪರಿಣಾಮ 14.2 ಕೆ.ಜಿ. ತೂಕದ ಸಿಲಿಂಡರ್ ಬೆಲೆ 574.50 ರೂ ಆಗಿದೆ.
ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ದರ ಕಳೆದ ಒಂದು ತಿಂಗಳಲ್ಲಿ 100.50 ರೂ ಕಡಿತ ಮಾಡಲಾಗಿದೆ ಎಂದು ಭಾರತೀಯ ತೈಲ ಕಂಪನಿ ಹೇಳಿಕೆ ತಿಳಿಸಿದೆ. ಎರಡು ತಿಂಗಳ ಅವಧಿಯಲ್ಲಿ 162 ರೂ ನಷ್ಟು ಬೆಲೆ ಇಳಿಕೆಯಾಗಿದೆ.
ಪ್ರಸ್ತುತ ವಾರ್ಷಿಕ 12 ಸಿಲಿಂಡರ್ ಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿದ್ದು, ಇದಕ್ಕೂ ಮೀರಿ ಹೆಚ್ಚು ಸಿಲಿಂಡರ್ ಅಗತ್ಯವಿರುವವರು ಸಬ್ಸಿಡಿ ರಹಿತವಾಗಿ ಖರೀದಿಸಬಹುದಾಗಿದೆ. ಅಲ್ಲದೇ ಅನೇಕ ಜನರು ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ಬಿಟ್ಟುಕೊಟ್ಟಿದ್ದು, ಇಂತಹ ಗ್ರಾಹಕರಿಗೆ ದರ ಇಳಿಕೆಯಿಂದ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ.