ಕಾಸರಗೋಡು: ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯಕೇಂದ್ರ ವ್ಯಾಪ್ತಿಯ ಉದ್ದಿಮೆ ಶೀಲತಾ ಕೇಂದ್ರದಲ್ಲಿ ಆ.13ರಂದು ಬೆಳಗ್ಗೆ 10.30ಕ್ಕೆ ಖಾಸಗಿ ವಲಯಗಳಲ್ಲಿ ಬರಿದಾಗಿರುವ 65 ಹುದ್ದೆಗಳಿಗೆ ನೇಮಕಾತಿ ಸಂಬಂಧ ಸಂದರ್ಶನ ಜರುಗಲಿದೆ. ಮೆನೆಜರ್,ಮೆನೆಜರ್ಸ್ ಟ್ರ್ರೈನಿ, ಇ.ಎಂ.ಟಿ.ನರ್ಸ್ ಹುದ್ದೆಗಳಿಗೆ ಈ ವೇಳೆ ನೇಮಕಾತಿ ನಡೆಯಲಿದೆ. ಮಹಿಳೆಯರು, ಪುರುಷರೂ ಸಂದರ್ಶನದಲ್ಲಿ ಭಾಗವಹಿಸಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ: 04994-255582 ಸಂಪರ್ಕಿಸಬಹುದು.
ಕಾರಡ್ಕದಲ್ಲಿ 13ರಂದು ಸಂದರ್ಶನ
ಮುಳ್ಳೇರಿಯ: ಕಾರಡ್ಕ ಗ್ರಾಮಪಂಚಾಯತ್ ನ ಬಡ್ಸ್ ಶಾಲೆಗೆ ಆಯಾ, ನೈಟ್ ಸೆಕ್ಯೂರಿಟಿ ಗಾರ್ಡ್ ಹುದ್ದೆಗಳಿಗೆ ನೇಮಕ ಸಂಬಂಧ ಸಂದರ್ಶನ ಆ.13ರಂದು ಬೆಳಿಗ್ಗೆ 10.30ಕ್ಕೆ ಶಾಲೆಯ ಕಚೇರಿಯಲ್ಲಿ ನಡೆಯಲಿದೆ. ಆಯಾರ ಹುದ್ದೆಗೆ 8ನೇ ತರಗತಿ ಶಿಕ್ಷಣ, ನೈಟ್ ಸೆಕ್ಯೂರಿಟಿ ಗಾರ್ಡ್ ಹುದ್ದೆಗೆ ಎಸ್.ಎಸ್.ಎಲ್.ಸಿ. ಶಿಕ್ಷಣಾರ್ಹತೆಯಾಗಿದೆ. ಆಸಕ್ತರು ಅಬಯೋಡಾಟಾ, ಅರ್ಜಿಗಳೊಂದಿಗೆ ಅರ್ಹತಾಪತ್ರಗಳ ಸಹಿತ ಹಾಜರಾಗಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 04994-2600 ಸಂಪರ್ಕಿಸಬಹುದು.