ಕಾಸರಗೋಡು: ಅನೇಕ ಶತಮಾನಗಳಿಂದ ಪ್ರಧಾನವಾಹಿನಿಯಿಂದ ಬೇರ್ಪಟ್ಟು ಬದುಕಿನಲ್ಲಿಬವಣೆ ಅನುಭವಿಸುತ್ತಿರುವ ಪರಿಶಿಷ್ಟ ಜನಾಂಗ ಇಂದು ಪ್ರಗತಿಯ ಪಥದಲ್ಲಿದ್ದಾರೆ.
ರಾಜ್ಯ ಸರಕಾರ ಪರಿಶಿಷ್ಟ ಜನಾಂಗದ ಇಲಾಖೆಗಳ ಮೂಲಕ ಈ ಜನಾಂಗಗಳ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ಜಾರಿಗೊಳಿಸಿದ್ದು, ಕಳೆದ 3 ವರ್ಷಗಳ ಅವಧಿಯಲ್ಲಿಈ ನಿಟ್ಟಿನಲ್ಲಿ 106,82,53,210 ರೂ. ವೆಚ್ಚಮಾಡಿದೆ.
ವಿವಿಧ ಯೋಜನೆಗಳ ಮುಖಾಂತರ ಜಿಲ್ಲೆಯಲ್ಲಿ 2016-17 ಆರ್ಥಿಕ ವರ್ಷದಲ್ಲಿ 42.95 ಕೋಟಿ ರೂ. , 2017-18 ವರ್ಷದಲ್ಲಿ 30.78 ಕೋಟಿ ರೂ., 2018-19 ವರ್ಷದಲ್ಲಿ 28.49 ಕೋಟಿ ರೂ., 2019-20 ವರ್ಷದಲ್ಲಿ ಜುಲೈ ತಿಂಗಳವರೆಗೆ 4.59 ಕೋಟಿ ರೂ. ಸರಕಾರ ವೆಚ್ಚಮಾಡಿದೆ.
ಶಿಕ್ಷಣ, ಆರೋಗ್ಯ,ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಇತ್ಯಾದಿಗಳಿಗಾಗಿ ಸಮಗ್ರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಪಿ.ಟಿ.ಅನಂತಕೃಷ್ಣನ್ ತಿಳಿಸಿದರು. ಆರೋಗ್ಯ ವಲಯದ ಸೇವೆಗಾಗಿ 88 ಪ್ರಮೋಟರ್ ಗಳನ್ನು ಜಿಲ್ಲೆಯಲ್ಲಿ ನೇಮಿಸಲಾಗಿದೆ. ಬೇಳದಲ್ಲಿ ಚಟುವಟಿಕೆ ನಡೆಸುತ್ತಿರುವಸರಕಾರಿ ಆಯುರ್ವೇದ ಡಿಸ್ಪೆನ್ಸರಿ ಸಹಿತ 7 ಸಂಸ್ಥೆಗಳು ಇಲಾಖೆ ವ್ಯಾಪ್ತಿಯಲ್ಲಿವೆ. ಕಾಸರಗೋಡು ಪರವನಡ್ಕದಲ್ಲಿರುವ ಹೆಣ್ಣುಮಕ್ಕಳ ವಸತಿಶಾಲೆ, ಕುತ್ತಿಕೋಲು, ವಾಣಗನರ, ಬಳಾಂತೋಡು ಪ್ರದೇಶಗಳ ಪ್ರೀಮೆಟ್ರಿಕ್ ಹಾಸ್ಟೆಲ್ ಗಳು, ರಾವಣೇಶ್ವರದ ಹೆಣ್ಣುಮಕ್ಕಳ ಪ್ರೀಮೆಟ್ರಿಕ್ ಹಾಸ್ಟೆಲ್ ಇತ್ಯಾದಿ ಸಂಸ್ಥೆಗಳು ಶಿಕ್ಷಣವಲಯದಲ್ಲಿ ದೊಡ್ಡ ಸಾಧನೆ ಮಾಡುತ್ತಿವೆ. ಕುಂಡಖುಳಿಯಲ್ಲಿ ಆದಿವಾಸಿ ಜನಾಂಗಕ್ಕಾಗಿ ಆಶ್ರಮಂ ಇಂಗ್ಲೀಷ್ ಮಧ್ಯಮ ಶಾಲೆ ಚಟುವಟಿಕೆ ನಡೆಸುತ್ತಿದೆ. ಜೊತೆಗೆ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗಾಗಿ ಬೇಡಡ್ಕದಲ್ಲಿ ಹಾಸ್ಟೆಲ್ ನಿರ್ಮಾಣ ಪ್ರಗತಿಯಲ್ಲಿದೆ.
ಸಮಗ್ರ ಆರೋಗ್ಯ ಯೋಜನೆ ಅಂಗವಾಗಿ ಆರ್ಥಿಕ ಸ್ಥಿತಿಗತಿ ನೋಡದೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಮಾರಕ ರೋಗದಿಂದ ಬಳಲುತ್ತಿರುವವರಿಗೆ ರೋಗದ ಪ್ರಮಾಣ ಗಮನಿಸಿ ಆರ್ಥಿಕ ಸಹಾಯವನ್ನೂ ನೀಡಲಾಗುತ್ತದೆ. ಜೊತೆಗೆ ಮಹಿಳೆಯರ ಗರ್ಭಧಾರಣೆಯ ಅವಧಿಯಲ್ಲಿ ಮೂರು ತಿಂಗಳಿಂದ ಮಗುವಿನ ಜನನ ವರೆಗಿನ ಅವಧಿಯಲಿ ತಿಂಗಳಿಗೆ 2 ಸಾವಿರ ರೂ. ಸಹಾಯಧನ ಒದಗಿಸಲಾಗುತ್ತದೆ.
ಪರಿಶಿಷ್ಟ ಜನಾಂಗದವರ ಕಾಲನಿ ಇತ್ಯಾದಿಗಳ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಸಮಗರ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಅಂಬೇಡ್ಕರ್ ಸೆಟಲ್ ಮೆಂಟ್ ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 8 ಕಾಲನಿಗಳಿಗೆ ತಲಾ ಒಂದು ಕೊಟಿ ರೂ. ಮಂಜುರು ಮಾಡಲಾಗಿದೆ. ಲಿಂಕ್ ರಸ್ತೆಗಳು, ಕಾಲ್ನಡಿಗೆ ಹಾದಿಗಳು, ಸಮುದಾಯ ಕೇಂದ್ರಗಳು, ಅಂಗನವಾಡಿಗಳು ಇತ್ಯಾದಿನಿರ್ಮಾಣಕ್ಕೂ, ಕುಡಿಯುವನೀರಿಗಾಗಿ ಯೋಜನೆ ಪೂರಕವಾಗಿದೆ. ಜೊತೆಗೆ ನೂತನವಸತಿನಿರ್ಮಾಣ, ಮನೆಯದುರಸ್ತಿ ಇತ್ಯಾದಿಗಳಿಗೂ ಸಹಾಯ ಒದಗಿಸಲಾಗುತ್ತದೆ. ಪಿಲಿಕೂಡ್ಲು, ರಾಮನಡ್ಕ, ಚುಳಂಕಲ್ಲು, ಕಿನಾನೂರು-ಕರಿಂದಳಂ ಗ್ರಾಮಪಂಚಾಯತ್ ನ ಚೀಟ್ಟ್, ವೆಳ್ಲರಿಕ್ಕಯ, ಮೇಕೋಡಂ, ವಳಂ?ಂಗಾನಂ, ಮಾವಿನಕಟ್ಟೆ, ಕುಂಟಂಗೇರಡ್ಕ, ವಾಯಿಕಾನಂ ಇತ್ಯಾದಿ ಕಡೆ ಪರಿಶಿಷ್ಟ ಜನಾಂಗದವರ ಕಾಲನಿಗಳ ಅಭಿವೃದ್ಧಿ ಕಾಮಗಾರಿಗಳು ತ್ವರಿತದಿಂದ ನಡೆಯುತ್ತಿವೆ.
ಜಿಲ್ಲೆಯ ಇತಿಹಾಸದಲ್ಲೇ ಅತಿ ಕಡಿಮೆ ಅವಧಿಯಲ್ಲಿ ಪರಿಶಿಷ್ಟ ಜನಾಂಗದವರಿಗೆ ಇಷ್ಟು ದೊಡ್ಡ ಪ್ರಮಾಣದ ಮೊಬಲಗು ವೆಚ್ಚಮಾಡಲಾಗಿದೆ. ಶಿಕ್ಷಣ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ವಿವಿಧಯೋಜನೆಗಳಿಗಾಗಿ ನಿಧಿ ಮಂಜೂರುಮಾಡಲಾಗಿದೆ. ಪ್ರೀಮೆಟ್ರಿಕ್ ಶಿಕ್ಷಣದೊಂದಿಗೆ ತೊಡಗಿ, ಅತ್ಯುನ್ನತ ತಾಂತ್ರಿಕ ಶಿಕ್ಷಣವರೆಗೆ ಕಲಿಕೆಗಾಗಿ ಸರಿಸುಮಾರು 18 ಯೋಜನೆಗಳು ಜಾರಿಯಲ್ಲಿವೆ. ಆರೋಗ್ಯ ಸುರಕ್ಷೆ ಖಚಿತಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ರಾಜ್ಯ ವಿವಿಧ ವೈದ್ಯಕೀಯ ಕಾಲೇಜುಗಳ ಸಹಿತ ವಿವಿಧ ಯೋಜನೆಗಳ ಮೂಲಕ ಉಚಿತ ಚಿಕಿತ್ಸೆ ಸೌಲಭ್ಯ ಒಗಿಸಲಾಗುತ್ತಿದೆ. ಸಾಮಾಜಿಕ, ಆರ್ಥಿಕ ಅಭಿವೃಧ್ಧಿಗಾಗಿ ಆದಿವಾಸಿ ಪಂಗಡ ಪ್ಯಾಕೇಜ್, ಆಹಾರ ಸಹಾಯ ಕಾರ್ಯಕ್ರಮ, ಕೈಸಹಾಯ ಯೋಜನೆ, ಅಂಬೇಡ್ಕರ್ ಅಭಿವೃದ್ಧಿ ಯೋಜನೆ, ಆದಿವಾಸಿ ಪುನರ್ವಸತಿ ಅಭಿವೃದ್ಧಿ ಮಿಷನ್, ಕಿರಿಟಿಕಲ್ ಗ್ರೂಪ್ಫಿಲ್ಲಿಂಗ್ ಸ್ಕಿಂ ಸಹಿತ ಸುಮಾರು 20 ಪ್ರತ್ಯೇಕ ಅಭಿವೃದ್ಧಿಯೋಜನೆಗಳು ಜಾರಿಗೊಳ್ಳುತ್ತಿವೆ.
ಜಿಲ್ಲೆಯಲ್ಲಿ ಕೊರಗ,ಮರಾಟಿ, ಕುಡಿಯ, ಮಲಯ, ಮಾವಿಲ, ಮಲವೇಟ್ಟುವನ್ ಜನಾಂಗದವರು ಪ್ರಧಾನವಾಗಿ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದವರಾಗಿದ್ದಾರೆ. ಜಿಲ್ಲೆಯ ಪಡನ್ನ, ವಲಿಯಪರಂಬ, ತ್ರಿಕರಿಪುರ, ಚೆರುವತ್ತೂರು ಉಳಿದಂತೆ ಎಲ್ಲ ಗ್ರಾಮಪಂಚಾಯತ್ ಗಳಲ್ಲೂ,ನಗರಸಭೆಗಳಲ್ಲೂ ಈ ಜನಾಂಗದವರು ವಾಸಿಸುತ್ತಿದ್ದಾರೆ.
ಜಿಲ್ಲೆಯ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯ ಗಣನೆ ಪ್ರಕಾರ ಜಿಲ್ಲೆಯ 1262 ಕಾಲನಿಗಳ 21,283 ಕುಟುಂಬಗಳಲ್ಲಿ 83,765 ಮಂದಿ ವಾಸಿಸುತ್ತಿದ್ದಾರೆ. ಪನತ್ತಡಿ,ಕೋಡೋಂ-ಬೇಳೂರು, ಎಣ್ಮಕಜೆ, ದೇಲಂಪಾಡಿ ಸಹಿತ ಮಲೆನಾಡ ಪ್ರದೇಶಗಳ ಗ್ರಾಮಪಂಚಾಯತ್ ಗಳಲ್ಲಿಈ ಜನಾಂಗದವರು ಅತ್ಯಧಿಕ ಪ್ರಮಾಣದಲ್ಲಿ ವಾಸಿಸುತ್ತಿದ್ದಾರೆ. ಪನತ್ತಡಿಯ 63 ಕಾಲನಿಗಳಲ್ಲಿ 2150 ಕುಟುಂಬಗಳಲ್ಲಿ 9522 ಮಂದಿ, ಕೋಡೋ-ಬೇಳೂರಿನಲ್ಲಿ 107 ಕಾಲನಿಗಳಲ್ಲಿ 1940 ಕುಟುಂಬಗಳಲ್ಲಿ 7236 ಮಂದಿ,ಎಣ್ಮಕಜೆಯಲ್ಲಿ 117 ಕಾಲನಿಗಳಲ್ಲಿ 1809 ಕುಟುಂಬಗಳಲ್ಲಿ 7220 ಮಂದಿ, ದೇಲಂಪಾಡಿಯಲ್ಲಿ 74 ಕಾಲನಿಗಳಲ್ಲಿ 1336 ಕುಟುಂಬಗಳಲ್ಲಿ 6128 ಮಂದಿ ವಾಸಿಸುತ್ತಿದ್ದಾರೆ.
ಜನಸಂಖ್ಯೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿರುವವರು ಮರಾಟಿಜನಾಂಗದವರು. 8154 ಕುಟುಂಬಗಳಲ್ಲಿ 34,367 ಮಂದಿ ಮರಾಟಿ ಜನಾಂಗದವರು ಇದ್ದಾರೆ. 7514 ಕುಟುಂಬಗಳಲ್ಲಿ 27,702 ಮಂದಿ ಮಾವಿಲರಿದ್ದಾರೆ. 4772 ಕುಟುಂಬಗಳಲ್ಲಿ 18,816 ಮಲವೇಟ ಜನಾಂಗದವರಿದ್ದಾರೆ. 530 ಕುಟುಂಬಗಳಲ್ಲಿ 1843 ಕೊರಗ ಜನಾಂಗದವರು, 266 ಕುಟುಂಬಗಳಲ್ಲಿ 856 ಕುಡಿಯರು, 43 ಕುಟುಂಬಗಳಲ್ಲಿ 153 ಮಲೆಯರು ಜಿಲ್ಲೆಯಲ್ಲಿ ವಾಸವಾಗಿದ್ದಾರೆ.
ಇದಲ್ಲದೆ ಉದ್ಯೋಗ ಸಂಬಂಧ ಬೇರೆ ಪ್ರದೇಶಗಳಿಗೆ ಪರಿಶಿಷ್ಟ ಪಂಗದವರು ಜಿಲ್ಲೆಯವರಿದ್ದಾರೆ. ಒಂದು ಮಲೆವೇಟ ಕುಟುಂಬದ 5 ಮಂದಿ, ಉಳ್ಳಡ ಜನಾಂಗದ ಕುಟುಂಬದ 4 ಮಂದಿ, 2 ಕರಿಂಬಾಡನ್ ಜನಾಂಗದ ಒಂದೇ ಕುಟುಂಬದ 14 ಮಂದಿ ಜಿಲ್ಲೆಯಲ್ಲಿ ವಾಸವಾಗಿದ್ದಾರೆ. ರಾಜ್ಯದ 5 ಆದಿವಾಸಿ ಜನಾಂಗಗಳಲ್ಲಿ ಒಂದಾಗಿರುವವರು ಕೊರಗ ಜನಾಂಗದವರು. ಚೋಲನಾಯ್ಕರು,ಕುರುಂಬ, ಕಾಟುನಾಯ್ಕರು, ಕಾಡಾರ್ ಎಂಬರು ಇತರ ವಿಭಾಗದವರು.
(ಚಿತ್ರ ಮಾಹಿತಿ: ಪರಿಶಿಷ್ಟ ಪಂಗಡದ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗಾಗಿಬೇಡಡ್ಕದಲ್ಲಿ ನಿರ್ಮಿಸಲಾಗುತ್ತಿರುವ ಹಾಸ್ಟೆಲ್ ಕಟ್ಟಡ.)