ಬದಿಯಡ್ಕ: ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಉಪಖಂಡ ಸಮಿತಿ ಸಂತಡ್ಕ ವತಿಯಿಂದ 16 ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆಯು ಆ.9ನೇ ಶುಕ್ರವಾರ ಬೆಳಗ್ಗೆ ಗಂಟೆ 8.30ಕ್ಕೆ ಅರಸು ಸಂಕಲ ಭವನ ಅರಸು ಸಂಕಲ ದೈವ ಕ್ಷೇತ್ರ ಸಂತಡ್ಕದಲ್ಲಿ ವೇದಮೂರ್ತಿ ಕುರಿಯ ರಾಮಮೂರ್ತಿ ಅವರ ದಿವ್ಯ ಹಸ್ತದಿಂದ ಜರಗಲಿದೆ.
ಆ ಬಗೆಗಿನ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆಯನ್ನು ಅರಸು ಸಂಕಲ ದೈವ ಕ್ಷೇತ್ರ ಸಂತಡ್ಕ ಇದರ ಅಧ್ಯಕ್ಷ ಡಾ.ಶ್ರೀಧರ ಭಟ್ ವಹಿಸಲಿದ್ದು, ಡಾ.ರೂಪಾ ಎಂ.ಉಪ್ಪಳ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಧಾರ್ಮಿಕ ಪ್ರವಚನವನ್ನು ನಿವೃತ್ತ ಅಧ್ಯಾಪಕ ಅಶೋಕ್ ಬಾಡೂರು ನೀಡಲಿದ್ದಾರೆ. ವಿ.ಹಿಂ.ಪ. ಮೀಂಜ ಖಂಡ ಸಮಿತಿ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ಉಪಸ್ಥಿತರಿರುವರು. ಮಧ್ಯಾಹ್ನ ಅನ್ನ ಸಂತರ್ಪಣೆ ಜರಗಲಿದೆ.