ಮಂಜೇಶ್ವರ: ಕೆ. ಜಿ. ಭಟ್ ವಾಚನಾಲಯದ ಆಶ್ರಯದಲ್ಲಿ ಸೆ. 9ರಂದು ಮಧ್ಯಾಹ್ನ 2 ಗಂಟೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಓಣಂ ಹಬ್ಬ ಆಚರಿಸಲಾಗುವುದು. ಎಲ್‍ಪಿ, ಯುಪಿ, ಪ್ರೌಢಶಾಲಾಮಟ್ಟದಲ್ಲಿ ಹಾಗೂ ಹಿರಿಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಗ್ರಂಥಾಲಯ ಸಮಿತಿ ಕಾರ್ಯದರ್ಶಿ ಪಿ. ದಾಮೋದರನ್ ಅಧ್ಯಕ್ಷತೆ ವಹಿಸುವರು. ಅಡ್ಕತ್ತಬೈಲು ಸರಕಾರಿ ಶಾಲಾ ಅಧ್ಯಾಪಕ ಮ್ಯಾಥ್ಯೂ ಟಿ., ವೇಣುಗೋಪಾಲನ್, ಅಧ್ಯಾಪಕ ಕರ್ನೆಲಿಯಸ್ ಲೋಬೊ ಹಾಗೂ ವಾಚನಾಲಯದ ಸದಸ್ಯರು ಉಪಸ್ಥಿತರಿರುವರು.