ಮಂಜೇಶ್ವರ: ವಿದ್ಯಾರ್ಥಿ ಕ್ಲಬ್ ಚಟುವಟಿಕೆಗಳು ಪಠ್ಯ ವಿಷಯಗಳನ್ನು ರಸವತ್ತಾಗಿಸಲು ಮತ್ತು ಪ್ರಾಯೋಗಿಕಮಟ್ಟವನ್ನು ತಿಳಿಯಲು ಸಹಕಾರಿ ಎಂದು ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕ ಹರೀಶ್ ನಾಯಕ್ ನುಡಿದರು.
ಮೂಡಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ವಿವಿಧ ಕ್ಲಬ್‍ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಜೋರ್ಜ್ ಕ್ರಾಸ್ತ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಭಾಷೆ ಹಾಗೂ ವಿಷಯಗಳ ಕ್ಲಬ್‍ಗಳಿಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ಏರ್ಪಡಿಸಲಾಯಿತು. ಎಲ್ಲ ಕ್ಲಬ್‍ಗಳ ನಾಯಕರನ್ನು ಆಯ್ಕೆ ಮಾಡಲಾಯಿತು. ರಕ್ಷಕ-ಶಿಕ್ಷಕ ಸಂಘ, ಮಾತೃ ಸಂಘದ ಅಧ್ಯಕ್ಷರು ಹಾಗೂ ಅಧ್ಯಾಪಕರಾದ ನೆಲ್ಸನ್ ಡಿಸೋಜ, ಚಿತ್ರ ಟೀಚರ್ ಉಪಸ್ಥಿತರಿದ್ದರು. ಎಸ್‍ಆರ್‍ಜಿ ಸಂಚಾಲಕಿ ದಯಾವತಿ ಟೀಚರ್ ಸ್ವಾಗತಿಸಿ, ಪ್ರಫುಲ್ಲ ಕುಮಾರಿ ಟೀಚರ್ ವಂದಿಸಿದರು.