ಕಾಸರಗೋಡು: ಈ ವರ್ಷದ ರಾಜ್ಯಮಟ್ಟದ ಶಾಲಾ ಕಲೋತ್ಸವ ಕಾಞಂಗಾಡಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. 2019 ನವೆಂಬರ್ ಅಥವಾ ಡಿಸೆಂಬರ್‍ನಲ್ಲಿ ಕಲೋತ್ಸವ ನಡೆಯಲಿದೆ.
ರಾಜ್ಯಮಟ್ಟದ ಶಾಲಾ ಕ್ರೀಡಾಕೂಟ ಕಣ್ಣೂರು ಅಥವಾ ತಲಶ್ಯೇರಿಯಲ್ಲಿ ಜರುಗಲಿದೆ. ರಾಜ್ಯ ಮಟ್ಟದ ಶಾಲಾ ವಿಜ್ಞಾನೋತ್ಸವ ನವೆಂಬರ್ 1ರಿಂದ 3ರ ವರೆಗೆ ತೃಶ್ಯೂರ್‍ನಲ್ಲಿ, ವಿಶೇಷ ಶಾಲಾ ಮಕ್ಕಳ ಕಲೋತ್ಸವ ಅಕ್ಟೋಬರ್ 20ರಿಂದ 22ರ ವರೆಗೆ ಪಾಲಕ್ಕಾಡ್ ಅಥವಾ ಶೋರ್ನೂರ್‍ನಲ್ಲಿ , ರಾಜ್ಯ ಐಟಿಐ ಕಲೋತ್ಸವ ಹಾಗೂ ಶಿಕ್ಷಕರ ಕಲೋತ್ಸವ ಸೆಪ್ಟಂಬರ್ 4 ಮತ್ತು 5ರಂದು ಜರುಗಿಸಲು ತೀರ್ಮಾನಿಸಲಾಗಿದೆ.
ರಾಜ್ಯಮಟ್ಟದ ಶಾಲಾ ಕಲೋತ್ಸವ ಈ ಹಿಂದೆ 1991ರಲ್ಲಿ ಕಾಸರಗೋಡಿನಲ್ಲಿ ನಡೆದಿದ್ದು, ಇದೀಗ ಎರಡನೇ ಬಾರಿಗೆ ಜಿಲ್ಲೆಯನ್ನು ಪರಿಗಣಿಸಲಾಗಿದೆ. ನಾಲ್ಕು ದಿವಸಗಳ ಕಾಲ ಕಲೋತ್ಸವ ನಡೆಯಲಿದೆ. ಜಿಲ್ಲೆಯಲ್ಲಿ ರಾಜ್ಯಮಟ್ಟದ ಶಾಲಾ ಕಲೋತ್ಸವ ನಡೆಸುವ ಬಗ್ಗೆ ಕಳೆದವರ್ಷವೇ ತೀರ್ಮಾನ ಕೈಗೊಳ್ಳಲಾಗಿತ್ತು.