ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರ 59ನೇ ಚಾತುರ್ಮಾಸ್ಯದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಗುರುವಾರ ಸಂಜೆ ಲಯಲಹರಿ ಸಂಗೀತ ವಾದ್ಯೋಪಕರಣಗಳ ಜುಗಲ್‍ಬಂದಿ ನಡೆಯಿತು.
ವಿದ್ವಾನ್ ಎಂ.ಕೆ.ಪ್ರಾಣೇಶ್ ಬೆಂಗಳೂರು(ಕೊಳಲು), ವಿದ್ವಾನ್ ವಿ.ಎಸ್.ಯಶಸ್ವಿ ಬೆಂಗಳೂರು(ಪಿಟೀಲು), ವಿದ್ವಾನ್. ಅನೂರು ಅನಂತಕೃಷ್ಣ ಶರ್ಮ ಬೆಂಗಳೂರು ಹಾಗೂ ಶಿಷ್ಯವೃಂದ ತಾಳವಾದ್ಯಗಳಲ್ಲಿ ಸಹಕರಿಸಿದರು.
ಶುಕ್ರವಾರ ಪ್ರಸಿದ್ದ ಕಲಾವಿದರಿಂದ ಯಕ್ಷ ಗಾಯನ ಕಾರ್ಯಕ್ರಮ ನಡೆಯಿತು. ಇಂದು(ಶನಿವಾರ) ಸಂಜೆ 7 ರಿಂದ ವಿದುಷಿಃ ಉಷಾ ಈಶ್ವರ ಭಟ್ ಅವರಿಂದ ಸಂಗೀತ ಕಚೇರಿ ನಡೆಯಲಿದೆ. ವಿದ್ವಾನ್ ವೇಣುಗೋಪಾಲ ಶಾನುಭೋಗ್(ವಯಲಿನ್), ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು(ಮೃದಂಗ) ಹಾಗೂ ವಿದ್ವಾನ್ ಈಶ್ವರ ಭಟ್(ಘಟಂ)ನಲ್ಲಿ ಸಹಕರಿಸುವರು.