ಬದಿಯಡ್ಕ: ಕೆಡೆಂಜಿ ಶ್ರೀ ವಿಷ್ಣುಪ್ರಿಯ ಭಜನಾ ಸಂಘದ ಆಶ್ರಯದಲ್ಲಿ ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಆಟಿ ತಿಂಗಳಲ್ಲಿ ಪ್ರತೀವರ್ಷದಂತೆ ಅಮಾವಾಸ್ಯೆಯಂದು ರಾಮಾಯಣ ಪಾರಾಯಣ ಜರಗಿತು. ಸಂಜೆ 4 ಗಂಟೆಯಿಂದ 6 ಗಂಟೆಯ ತನಕ ಇಕ್ಕೇರಿ ರಾಮ ಮಾಸ್ತರ್ ಪಾರಾಯಣ ಮಾಡಿದರು. ಅಧ್ಯಾಪಕ ಚಂದ್ರಹಾಸನ್ ನಂಬ್ಯಾರ್ ಮುನಿಯೂರು ಪ್ರವಚನ ನಡೆಸಿಕೊಟ್ಟರು. ತೊರವೆ ರಾಮಾಯಣದಲ್ಲಿ ರಾಮಲಕ್ಷ್ಮಣರು ತಂದೆ ದಶರಥನ ಮರಣಾನಂತರ ನಡೆಸುವ ಪಿತೃಪಿಂಡ ಪ್ರಧಾನ ಕಥಾಭಾಗವನ್ನು ಆಯ್ದುಕೊಳ್ಳಲಾಗಿತ್ತು. ಶ್ರೀ ವಿಷ್ಣುಪ್ರಿಯ ಭಜನ ಸಂಘದ ಕಾರ್ಯದರ್ಶಿ ಈಶ್ವರ ಮಾಸ್ತರ್ ಪೆರಡಾಲ ಸಹಕರಿಸಿದ್ದರು.
ಕೆಡೆಂಜಿಯಲ್ಲಿ ತೊರವೆ ರಾಮಾಯಣ ಪಾರಾಯಣ
0
ಆಗಸ್ಟ್ 03, 2019