ಬದಿಯಡ್ಕ: ಶ್ರೀ ಎಡನೀರು ಸಂಸ್ಥಾನದ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪೂರ್ಣಾನುಗ್ರಹದೊಂದಿಗೆ ಶ್ರೀ ಮಠದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಹಾಸಭೆ ಎಡನೀರಿನ ಶ್ರೀ ವಿಷ್ಣುಮಂಗಲ ದೇವಸ್ಥಾನದ ರಾಜಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ 32 ನೇ ವರ್ಷದ ಉತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕುಂಜರಕಾನ ರಾಮಕೃಷ್ಣ ಭಟ್, ಉಪಾಧ್ಯಕ್ಷರಾಗಿ ಬಾಬು ಪುರುಷ ಎಡನೀರು, ಬಾಲಕೃಷ್ಣ ಆಚಾರ್ಯ ವೀರಮೂಲೆ, ರಾಜೇಶ್ ಕುಂಡೋಲುಮೂಲೆ, ಸರಸ್ವತಿ ಟೀಚರ್ ಎಡನೀರು, ವೀಣಾ ಟೀಚರ್, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಜೋಗಿ ಐಲುಕುಂಜೆ, ಜೊತೆ ಕಾರ್ಯದರ್ಶಿಗಳಾಗಿ ಕಿರಣ್ ಗಾಣಿಗರಮೂಲೆ, ಧನ್‍ರಾಜ್ ನಡಕೆಮೂಲೆ, ಸೋಮಶೇಖರ ಚಾಪಾಡಿ, ಸಂತೋಷ್ ಕುಮಾರ್ ಕೆರೆಮೂಲೆ, ಕಲಾ ದಾಮೋದರನ್, ಕೋಶಾ„ಕಾರಿಯಾಗಿ ಕಮಲಾಕ್ಷ ಕಲ್ಲುಗದ್ದೆ, ಲೆಕ್ಕಪರಿಶೋಧಕರಾಗಿ ಮಧುಸೂದನ ಕೆಮ್ಮಂಗಯ ಮೊದಲಾದವರನ್ನು ಆಯ್ಕೆ ಮಾಡಲಾಯಿತು.
ಸೆ.2 ಸೋಮವಾರ ದಂದು ನಡೆಯಲಿರುವ ಗಣೋಶೋತ್ಸವವನ್ನು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಯಿತು. ವೇಣುಗೋಪಾಲ ಮಾಸ್ತರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಾಯೀ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಿ.ಬಾಲಕೃಷ್ಣ ಮಾಸ್ತರ್ ವೋರ್ಕೂಡ್ಲು ಹಾಗು ದಿ.ದಿನೇಶ್ ಮಡಪ್ಪುರ ಅವರ ಸ್ಮರಣಾರ್ಥ ಮೌನ ಶ್ರದ್ದಾಂಜಲಿ ಅರ್ಪಿಸಲಾಯಿತು.