ಮಂಜೇಶ್ವರ: ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಾನವ ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಜರುಗಿತು.
ಜಿಲ್ಲಾ ಶಿಶು ಸಂರಕ್ಷಣೆ ಘಟಕದ ಮೂಲಕ ಜಾರಿಗೊಳಿಸುವ ಶರಣಬಾಲ್ಯಂ ಯೋಜನೆ ಅಂಗವಾಗಿ ಜರುಗಿದ ಸಮಾರಂಭಗಳ ಅಂಗವಾಗಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಎನ್ ಎಸ್ ಎಸ್ ಘಟಕದ ಸಹಕಾರದೊಂದಿಗೆ ಜನಜಾಗೃತಿ ಕಾರ್ಯಕ್ರಮ ಜರುಗಿತು. ಇದರೊಂದಿಗೆ ಕಾಲೇಜಿನ ಜಂಟಿ ಹ್ಯೂಮನ್ ಟ್ರಾಫಿಕಿಂಗ್ ಕ್ಲಬ್ ರಚನೆಯ ಚಟುವಟಿಕೆಗಳಿಗೂ ಚಾಲನೆ ಲಭಿಸಿದೆ.
ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಪಿ.ಬಿಜು ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಅಮಿತ ಎಸ್. ಅಧ್ಯಕ್ಷತೆ ವಹಿಸಿದ್ದರು. ಶರಣ ಬಾಲ್ಯಂ ರೆಸ್ಕ್ಯೂ ಅಧಿಕಾರಿ ಅಶ್ವಿನ್ ಬಿ., ಡಿ.ಸಿ.ಪಿ.ಕಾನೂನು ಸೇವಾ ಅಧಿಕಾರಿ ಶ್ರೀಜಿತ್, ಎನ್.ಎಸ್.ಎಸ್. ಘಟಕದ ಕಾರ್ಯದರ್ಶಿ ಕೀರ್ತಿನಾರಾಯಣ, ಕಾರ್ಯಕ್ರಮ ಅಜೀಷ್ ಮೊದಲಾದವರು ಉಪಸ್ಥಿತರಿದ್ದರು.