ಕಾಸರಗೋಡು: ಜಿಲ್ಲೆ ಅನೇಕ ವರ್ಷಗಳಿಂದ ಅನುಭವಿಸುತ್ತಿರುವ ತ್ಯಾಜ್ಯ ರಾಶಿ ಬೀಳುತ್ತಿರುವ ಸಮಸ್ಯೆ ಪರಿಹಾರಕ್ಕೆ ಅತ್ಯಾಧುನಿಕ ವೈ ಜ್ಞಾ ನಿಕ ಸೌಲಭ್ಯ ಸಹಿತದ ಪರಿಷ್ಕರಣೆ ಘಟಕ ಸ್ಥಾಪಿಸುವ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗಿನ ಮಾತುಕತೆ ಪ್ರಗತಿ ಕಾಣುತ್ತಿದೆ.
ಘಟಕ ಸ್ಥಾಪನೆಯಪ್ರಾರಂಭದ ಹಂತದ ಕುರಿತು ಜಿಲ್ಲ ಶುಚಿತ್ವ ಮಿಷನ್ ಆಶ್ರಯದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ಜರುಗಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು.
ತ್ಯಾಜ್ಯದ ಅವಶೇಷಗಳನ್ನು,ವಿಷಾನಿಲವನ್ನು ಹೊರಗೆಡಹದೆ ಪೈರಾಲಿಸಿಸ್ ತಂತ್ರ ಜ್ಞಾ ನ ಮೂಲಕ ಪರಿಷ್ಕರಿಸುವ ನೂತನ ತಂತ್ರ ಜ್ಞಾ ನ ಮೂಲಕದ ಘಟಕ ಸ್ಥಾಪನೆ ಜಿಲ್ಲೆಯ ಸಮಸ್ಯೆಗೆ ಪರಿಣಾಮಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳುಮೊದಲಾದವರನ್ನು ಕರೆಸಿ ನಡೆಸಿದ್ದ ಡಿ.ಪಿ.ಸಿ. ಸಭೆಯಲ್ಲಿ ಬೆಂಬಲವ್ಯಕ್ತವಾಗಿರುವುದಾಗಿ, ಶೀಘ್ರದಲ್ಲೇ ಈ ಯೋಜನೆಜಾರಿಗೊಳಿಸಲು ಯತ್ನಿಸುವುದಾಗಿ ಅವರು ಹೇಳಿದರು.
ಪೈರೋಲಿಸಿಸ್ ತಂತ್ರ ಜ್ಞಾ ನ ಸಹಿತದ ತ್ಯಾಜ್ಯ ಪರಿಷ್ಕರಣೆ ಸುಲಭ ಸಾಧ್ಯ ಎಂದು ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಭಿಮತ ವ್ಯಕ್ತಪಡಿಸಿದರು. ದಿನನಿತ್ಯ 50 ಟನ್ ತ್ಯಾಜ್ಯ ಈ ರೀತಿಯ ಪರಿಷ್ಕರಣೆಗೆ ಅತಗ್ಯವಿದೆ. ಸ್ಥಳೀಯಾಡಳಿತ ಸಂಸ್ಥೇಗಳ ನೇತೃತ್ವದಲ್ಲಿ ಕಂಪನಿಯೊಂದನ್ನು ರಚಿಸಿ ಕುಟುಂಬಶ್ರೀ,ಹರಿತ ಕ್ರಿಯ ಸೇನೆ ಇತ್ಯಾದಿಗಳ ಸಹಕಾರದೊಂದಿಗೆ ತ್ಯಾಜ್ಯ ಸಂಗ್ರಹ ನಡೆಸಲು ಉದ್ದೇಶವಿದೆ ಎಂದವರು ನುಡಿದರು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಲಾರಿಗಳಲ್ಲಿ ತ್ಯಾಜ್ಯ ಹರಿಕೊಂಡು ಘಟಕಕ್ಕೆ ತ್ಯಾಜ್ಯ ರವಾನಿಸಬೇಕು. ಘಟಕ ನಿರ್ಮಾಣಕ್ಕೆ 5 ಎಕ್ರೆ ಜಾಗದ ಅಗತ್ಯವಿದೆ. ಕೇರಳ ತೋಟಗಾರಿಕೆ ನಿಗಮ ವ್ಯಾಪ್ತಿಯಲ್ಲಿ ಯಾ ಬೇರೆ ಕಡೆಯಲ್ಲೋ ಜಾಗವನ್ನುಜಿಲ್ಲಾಡಳಿತೆ ಪತ್ತೆಮಾಡಲಿದೆ. ಘಟಕದಿಂದ ವಿಷಾನಿಲ, ತ್ಯಾಜ್ಯದ ಅವಶೇಷ, ದುಗರ್ಂಧ ಹೊರಗೆಡವದೇ ಇರುವ ಹಿನ್ನೆಲೆಯಲ್ಲಿ ಘಟಕ ನಿರ್ಮಾಣದ ಪ್ರದೇಶದ ನಿವಾಸಿಗಳಿಗೆ ತಯಾವುದೇ ಸಮಸ್ಯೆಗಳಿರುವುದಿಲ್ಲ ಎಂದವರು ನುಡಿದರು.
ಈ ಘಟಕಕ್ಕಾಗಿ ಖಾಸಗಿ ಸಂಸ್ಥೇಯೊಂದು 250 ಕೊಟಿ ರೂ. ಭಂಡವಾಳ ಹುಡಲಿದೆ. ಘಟಕದಲ್ಲಿ ಪರಿಷ್ಕರಿಸಲಾಗುವ ತ್ಯಾಜ್ಯದಿಂದ ವಿದ್ಯುತ್, ಡೀಸೆಲ್, ಕೃಷಿ ಗೊಬ್ಬರ ಇತ್ಯಾದಿಗಳನ್ನು ಈ ಖಾಸಗಿ ಸಂಸ್ಥೆ ವ್ಯವಹಾರ ನಡೆಸಲಿದೆ. ತಾಂತ್ರಿಕ ವಿದ್ಯೆ ಸಹಿತ ಪರಿಶೀಲಿಸಿರುವ ಸ್ವಿಸ್ ಚಾಲೆಂಜ್ ವಿಧಾನದಲ್ಲಿ ಖಾಸಗಿ ಸಂಸ್ಥೆಗಳ ಟೆಂಡರ್ ಕೋರಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಯೋಜನೆಯ ಕುರಿತು ಸಾರ್ವಜನಿಕರು ಅರ್ಥಮಾಡಿಕೊಳ್ಳುವಂತೆ ಸಮಗ್ರ ಮಾಹಿತಿಯನ್ನು ಒದಗಿಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಪರಿಸರವಾದಿಗಳ ಜೊತೆಗೂ ಮಾತುಕತೆ ನಡೆಸುವಂತೆ ಅವರು ಆಗ್ರಹಿಸಿದರು.
ಸಮಾಜದ ಎಲ್ಲ ಜನತೆಯೊಂದಿಗೆ ಮಾತುಕತೆ ನಡೆಸಿ ಅವರ ಒಪ್ಪಿಗೆಯ ಮೇರೆಗಷ್ಟೇ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಭರವಸೆ ನಿಡಿದರು.
ಎಂ.ಎಸ್.ಬಿ.ಎಸ್. ಎನರ್ಜಿ ಪ್ರವೇಟ್ ಲಿಮಿಟೆಡ್ ಸಂಸ್ಥೆಯ ಪ್ರತಿನಿಧಿಗಳು ಪೈರಾಲಿಸಿಸ್ ತಂತ್ರ ಜ್ಞಾ ನದೊಂದಿಗೆ ತ್ಯಾಜ್ಯ ಪರಿಷ್ಕರಿಸುವ ಘಟಕ ಕುರಿತು ಮಾಹಿತಿ ನೀಡಿದರು.
ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕ ಪಿ.ವಿ.ಜಬೀರ್, ಎ.ಡಿ.ಸಿ ಜನರಲ್ ಬೆವಿನ್ಜಾನ್ ವರ್ಗೀಸ್,ಹರಿತ ಕೇರಳಂ ಮಿಷನ್ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್,ಜಿಲ್ಲಾ ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಟಿ.ಜೆ.ಟರುಣ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಸ್ಪಷ್ಯಲ್ ಆಫೀಸರ್ ಇ.ಪಿ.ರಾಜ್ ಮೋಹನ್, ಬಡತನನಿವಾರಣೆ ವಿಭಾಗ ಕಾರ್ಯಕ್ರಮ ನಿರ್ದೇಶಕ, ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ವಿವಿಧ ರಾಜಕೀಯಪಕ್ಷಗಳ ಪ್ರತಿನಿಧಿಗಳಾದ ಎಂ.ಕುಂ ಞ ಂಬು ನಾಯರ್, ಕುರಿಯಾಕೋಸ್ ಪ್ಲಾಪರಂಬಿಲ್, ಪಿ.ಪಿ.ರಾಜ, ವಿ.ಸುರೇಶ್ ಬಾಬು, ನ್ಯಾಯವಾದಿ ಕೆ.ಶ್ರೀಕಾಂತ್,ಎ.ಅಬ್ದುಲ್ರಹಮಾನ್, ದಾಮೋದರನ್ಬೆಳ್ಳಿಗೆ ಮೊದಲಾದವರು ಉಪಸ್ಥಿತರಿದ್ದರು.
(ಸುದ್ದಿ ಚಿತ್ರ ಮಾಹಿತಿ: ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಕಿರು ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲಾಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿರುವುದು.)