ನಾಡಿನೆಲ್ಲೆಡೆ ಸಂಭ್ರಮದ ನಾಗರಪಂಚಮಿ
ಬದಿಯಡ್ಕ: ಭಾರತದ ಹಲವು ಭಾಗಗಳಲ್ಲಿ ನಾಗರಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸಲಾಗುತ್ತಿದೆ. ಪೂಜೆಯ ದಿನ ನಾಗದೇವತೆಗಳನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ ಎಲ್ಲಾ ಕೆಡುಕುಗಳಿಂದ ನಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಸೀಯಾಳ ಅಭಿಷೇಕವನ್ನು ಮಾಡುತ್ತಾರೆ. ಅನಂತ, ವಾಸುಕಿ, ಶೇಷ, ಪದ್ಮ, ಕಂಬಬಾಲ, ಕಾರ್ಕೋಟಕ, ಅಶ್ವತಾರ, ದೃತರಾಷ್ಟ್ರ, ಶಂಖಪಾಲ, ಕಾಲಿಯಾ, ತಕ್ಷಕ, ಪಿಂಗಾಲ ಎಂಬ 12 ನಾಗದೇವತೆಗಳಿದ್ದು ಇವರನ್ನು ನಾಗರ ಪಂಚಮಿಯಂದು ಪೂಜಿಸಲಾಗುತ್ತದೆ.
ಜಿಲ್ಲೆಯ ಪ್ರಸಿದ್ಧ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲೊಂದಾದ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗಿನಿಂದಲೇ ಭಕ್ತಾದಿಗಳು ಆಗಮಿಸಿ ನಾಗದೇವರಿಗೆ ಹೂ, ಹಾಲು, ಹಣ್ಣು, ಸೀಯಾಳ ಸಮರ್ಪಿಸಿದರು. ಬೆಳಗಿನ ಮಹಾಪೂಜೆಯ ನಂತರ ನಾಗನಿಗೆ ಹಾಲು, ಸೀಯಾಳ ಅಭಿಷೇಕ ಮಾಡಲಾಯಿತು. ಕ್ಷೇತ್ರದ ಪ್ರಧಾನ ಅರ್ಚಕರು ಮಂಗಳಾರತಿಯನ್ನು ಬೆಳಗಿ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು. ಅಭಿಷೇಕಕ್ಕಾಗಿ ಮಧ್ಯಾಹ್ನದ ಪೂಜೆಯ ತನಕ ಭಕ್ತಾದಿಗಳು ಆಗಮಿಸುತ್ತಿದ್ದರು.
ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ನಾಗ ಗುಹಾ ಸಾನಿಧ್ಯಕ್ಕೆ ಹಾಲು ಸೀಯಾಳ ಅಭಿಷೇಕ, ಹಾಲು ಪಾಯಸ ನೈವೇದ್ಯ, ವಿಶೇಷ ತಂಬಿಲ, ಮಹಾಪೂಜೆ ಜರಗಿಸಲಾಯಿತು. ಊರಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಪ್ರತೀವರ್ಷದಂತೆ ನೂರಾರು ಭಕ್ತಾದಿಗಳು ಪಾಲ್ಗೊಂಡರು. ಹಾಲು, ಸೀಯಾಳ ಅಭಿಷೇಕವನ್ನು ಮಾಡಿದ ಅರ್ಚಕರು ಮಹಾಮಂಗಳಾರತಿಯನ್ನು ನೆರವೇರಿಸಿ ಭಕ್ತಾದಿಗಳಿಗೆ ಪ್ರಸಾದವನ್ನು ನೀಡಿದರು. ಮಾನ್ಯ ಬಳಿಯ ದೇವರಕೆರೆ ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ ಬೆಳಗ್ಗೆ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರರು ನಾಗನಿಗೆ ಹಾಲಿನ ಅಭಿಷೇಕ ನಡೆಸಿಕೊಟ್ಟರು. ಕರಿಂಬಿಲ ಇಕ್ಕೇರಿ ಶ್ರೀ ಶಂಕರನಾರಾಯಣ ಮಠದಲ್ಲಿ ಹಾಗೂ ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲೂ ನಾಗನಿಗೆ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಲಾಯಿತು.
(ಸಮರಸ ಚಿತ್ರ ಮಾಹಿತಿ: (1)ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ನಾಗಸನ್ನಿಧಿಯಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಸಲಾಯಿತು,
2)ಬಳ್ಳಂಬೆಟ್ಟು ಪೈ ಮನೆತನದ ತರವಾಡಿನಲ್ಲಿ ಕುಂಬಳೆಯ ವೇದಮೂರ್ತಿ ಪುಂಡಲೀಕ ಭಟ್ ನೇತೃತ್ವದಲ್ಲಿ ನಾಗರ ಪಂಚಮಿ ಆಚರಿಸಲಾಯಿತು.