ಕಾಸರಗೋಡು: ಭಾರೀ ಮಳೆಯ ಕಾರಣ ನಾಳೆ(ಶುಕ್ರವಾರ) ಕಾಸರಗೋಡು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎ0ದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಂಗನವಾಡಿಗೆಳಿಗೂ ರಜೆ ಅನ್ವಯವಾಗುವುದೆ0ದು ತಿಳಿಸಲಾಗಿದೆ.
ಜೊತೆಗೆ ಮಳೆಯ ಹಿನ್ನೆಲೆಯಲ್ಲಿ ಪುಟಾಣಿಗಳ ಸಹಿತ ಹಿರಿಯ ಮಕ್ಕಳನ್ನು ವಿದ್ಯುತ್, ಕಟ್ಟಿ ನಿಂತಿರುವ ಮಳೆ ನೀರು,ನದಿ-ತೋಡುಗಳಿಂದ ದೂರ ಉಳಿಯುವಂತೆ ಪೋಷಕರು ಗಮನ ಹರಿಸಬೇಕು. ಅಲ್ಲದೆ ಬಿಸಿಯಾದ ಆಹಾರ ಪದಾರ್ಥಗಳನ್ನು ಸೇವಿಸುವಲ್ಲಿ ಜನರು ಗಮನ ನೀಡಬೇಕು. ಇದರಿಂದ ಜಾಡ್ಯಗಳಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ ಎನ್ನುವುದನ್ನು ಜನರು ಮನಗಾಣಬೇಕೆಂದು ಜಿಲ್ಲಾಧಿಕಾರಿಗಳು ಪ್ರತ್ಯೇಕ ಸೂಚನೆ ನೀಡಿರುವರು.