ಕಾಸರಗೋಡು: ಪ್ರತಿಯೊಂದು ಭಾಷೆಗೆ ಅದರದ್ದೇ ಆದ ಸಂಸ್ಕøತಿಯಿದೆ. ಮಾತೃ ಭಾಷೆಯನ್ನು ಪ್ರೀತಿಸಿದರೆ ಸಂಸ್ಕøತಿಯನ್ನು ಪ್ರೀತಿಸಿದಂತೆ. ಎಲ್ಲಾ ಸಂಸ್ಕøತಿಯನ್ನು ಪ್ರೀತಿಸುವುದೇ ನಮ್ಮ ದೇಶದ ಸಂಸ್ಕøತಿ ಎಂದು ಕರ್ನಾಟಕ ಕೊಂಕಣಿ ಅಕಾಡೆಮಿ ಮಾಜಿ ಅದ್ಯಕ್ಷರೂ, ಚಲನಚಿತ್ರ ನಟರೂ ಆಗಿರುವ ಕಾಸರಗೋಡು ಚಿನ್ನಾ ಹೇಳಿದರು.
ಅವರು ಪರ್ಕಳದ ಸಣ್ಣಕ್ಕಿ ಬೆಟ್ಟುವಿನಲ್ಲಿರುವ ವೇದಮೂರ್ತಿ ಹರೀಶ್ ಭಟ್ ಅವರ ನಿವಾಸದಲ್ಲಿ ಏರ್ಪಡಿಸಿದ 138 ನೇ ಘರ್ ಘರ್ ಕೊಂಕಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಎಂಟನೇ ಪರಿಚ್ಛೇದದಲ್ಲಿ ಕೊಂಕಣಿ ಭಾಷೆ ಸೇರಿಸಲ್ಪಟ್ಟ ಆಗೋಸ್ತು 20 ನೇ ದಿನವನ್ನು ಕೊಂಕಣಿ ಮಾನ್ಯತಾ ದಿವಸವನ್ನಾಗಿ ಎಲ್ಲಾ ಕೊಂಕಣಿಗರು ಆಚರಿಸಬೇಕು. ಕೊಂಕಣಿ ಮಾತೃ ಭಾಷಿಗರು 42 ಪಂಗಡದವರಿದ್ದರೂ, ಕೆಲವರು ಮಾತ್ರ ಈ ಸಂಭ್ರಮವನ್ನು ಆಚರಿಸುತ್ತಾರೆ. ತಾಯಿ ಭಾಷೆಯನ್ನು ಪ್ರೀತಿಸುವ ಮತ್ತು ಆರಾ„ಸುವ ಕೆಲಸ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲೂ ಆಚರಿಸಲ್ಪಡಬೇಕಾದ ಅನಿವಾರ್ಯತೆಯಿದೆ ಎಂದರು. ನುಡಿ ಮುತ್ತುಗಳು, ಗಾದೆಗಳ ಕೊಂಕಣಿ ವೊ ವ್ಯೋ ಗಳನ್ನು ಮುಂದಿನ ತಲೆಮಾರಿಗೆ ಹೇಳಿಕೊಡುವ ಕೆಲಸ ಹಿರಿಯರಿಂದ ಆಗಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ದೆಹಲಿಯ ನಿವೃತ್ತ ಎಂಜಿನಿಯರ್ ಗಣೇಶ್ ಪೈ ಮನೆಮನೆಗಳಲ್ಲಿ ಕೊಂಕಣಿ ದೀಪವನ್ನು ಹಚ್ಚುವ ಕಾಸರಗೋಡು ಚಿನ್ನಾ ಅವರ ಅಭಿಯಾನವು ನಿಜಕ್ಕೂ ಮಾದರಿ ಎಂದರಲ್ಲದೆ ಹಲವಾರು ಗ್ರಾಮೀಣ ಪ್ರತಿಭೆಗಳಿಗೆ ಇದು ವೇದಿಕೆ ಆಗಬಲ್ಲದು ಎಂದರು.
ಮೋಹಿನಿ ಭಟ್, ರಮ್ಯಾ ರಾವ್, ಪ್ರೇಮಲತಾ ರಾವ್, ವಿದ್ಯಾ, ಜಾಹ್ನವಿ, ಭುವಿ, ರಮಾ ಮಲ್ಯ, ಸುಧಾ ಪೈ, ನಂದಿನಿ ಶೆಣೈ, ಭಾಗ್ಯ ಕಾಶೀನಾಥ್ ಭಟ್ ಅವರಿಂದ ಕೊಂಕಣಿ ಭಕ್ತಿಗೀತೆ, ಭಾವಗೀತೆ ಹಾಗು ನೃತ್ಯ ಕಾರ್ಯಕ್ರಮ ನಡೆಯಿತು.
ಖ್ಯಾತ ಭಜನೆಗಾರ್ತಿ ಮಾಯಾ ಕಾಮತ್ ಅವರು ಕಾರ್ಯಕ್ರಮದ ಸಂಯೋಜನೆ ಮಾಡಿದ್ದರು. ಮನೆ ಯಜಮಾನ ವೇದಮೂರ್ತಿ ಹರೀಶ್ ಭಟ್ ಹಾಗು ಹೇಮಾ ಭಟ್ ಅವರು ಕಾಸರಗೋಡು ಚಿನ್ನಾ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಖ್ಯಾತ ರಂಗನಟ ಶಶಿ ಭೂಷಣ ಕಿಣಿ, ಬಾಲಚಂದ್ರ ಗಾಂಸ್, ಮಾಧವ ಶೇಟ್, ಸುಹಾಸ್ ರಾವ್, ವೆಂಕಟೇಶ್ ಶೇಟ್, ದೀಪಕ್ ಶೇಟ್ ಉಪಸ್ಥಿತರಿದ್ದರು.