ಮಧೂರು: ಎರಡು ಶತಮಾನಗಳ ಹಿಂದೆಯೇ ಯಕ್ಷಗಾನವನ್ನು ಉಚ್ಛ್ರಾಯ ಸ್ಥಿತಿಗೇರಿಸಿದ್ದ ಕೂಡ್ಲು ಮೇಳ, ಈ ಮೇಳದ ಕಲಾವಿದರು ಯಕ್ಷಗಾನಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು. ಕೂಡ್ಲಿನ ಮೇಳವಾಗಲೀ, ಯಕ್ಷಗಾನ ಸಂಘಗಳಾಗೀ ಎಲ್ಲೇ ಹೋದರೂ ಅದ್ಭುತ ಪ್ರದರ್ಶನ ನೀಡಿ ಯಶಸ್ಸನ್ನು ಸಾಧಿಸುತ್ತಿದ್ದುದು ಇತಿಹಾಸ ಮಾತ್ರವಲ್ಲದೆ ವರ್ತಮಾನವೂ ಆಗಿರುವುದು ಹೆಮ್ಮೆಯ ವಿಚಾರ. ಇದಕ್ಕೆ ಇಲ್ಲಿನ ಶ್ಯಾನ್‍ಭಾಗ್ ಮನೆತನದ, ತರಬೇತಿ ಕೇಂದ್ರದ ನಿರಂತರ ಪೆÇ್ರೀತ್ಸಾಹವೇ ಕಾರಣ ಎಂದು ಮಂಗಳೂರು ಹರಿಕಥಾ ಪರಿಷತ್ತಿನ ಅಧ್ಯಕ್ಷರು, ಹಿರಿಯ ನ್ಯಾಯವಾದಿ ದೇವಕೀತನಯ ಕೂಡ್ಲು ಅಭಿಪ್ರಾಯಪಟ್ಟರು.
ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ಇತ್ತೀಚೆಗೆ ನಡೆದ 18 ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಪತಿ ಅಡಿಗ ಕೂಡ್ಲು ನೆರವೇರಿಸಿದರು. ಬಳಿಕ ನಡೆದ ಅಂಬಾ ಶಪಥ ತಾಳಮದ್ದಳೆÉಯಲ್ಲಿ ಹಿಮ್ಮೇಳದಲ್ಲಿ ರಾಮ ಪ್ರಸಾದ್ ಮಯ್ಯ, ಸುರೇಂದ್ರ ಕೂಡ್ಲು, ರಿತೇಶ್ ಅಡ್ಕ, ಶಂಕರ ಕೊಮ್ಮಂಗಳ, ರಂಜಿತ್ ಗೋಳಿಯಡ್ಕ, ಅರ್ಪಿತ್ ಕೂಡ್ಲು ಸಹಕರಿಸಿದರು. ಮುಮ್ಮೇಳದಲ್ಲಿ ದೇವಕೀತನಯ ಕೂಡ್ಲು, ಅಚ್ಯುತ ಬಲ್ಯಾಯ, ಜಿ.ಕೆ.ಅಡಿಗ ಸೂರ್ಲು, ಕೃಷ್ಣಮೂರ್ತಿ ಅಡಿಗ ಕೂಡ್ಲು, ಸುರೇಶ್ ಮಣಿಯಾಣಿ, ಸುಂದರಕೃಷ್ಣ ಮಧೂರು, ಶೇಣಿ ವೇಣುಗೋಪಾಲ ಭಟ್ ಭಾಗವಹಿಸಿದರು. ಕಿಶೋರ್ ಕುಮಾರ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.
ಅಪರಾಹ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಚ್ಯುತ ಬಲ್ಯಾಯ ಕೂಡ್ಲು ವಹಿಸಿದರು. ಹಿರಿಯ ಭಾಗವತರಾದ ರವಿಶಂಕರ ಮಧೂರು ಅವರನ್ನು ಕ್ಷೇತ್ರದ ಮೊಕ್ತೇಸರ ಕೆ.ಜಿ.ಶ್ಯಾನ್‍ಭಾಗ್ ಸಮ್ಮಾನಿಸಿದರು. ಕೃಷ್ಣಮೂರ್ತಿ ಅಡಿಗ ಸಮ್ಮಾನ ಪತ್ರ ವಾಚಿಸಿದರು. ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಟ್ಯಗುರು ಸಬ್ಬಣಕೋಡಿ ರಾಮ ಭಟ್, ಕೂಡ್ಲು ಮೇಳದ ವ್ಯವಸ್ಥಾಪಕ ರವಿರಾಜ ಅಡಿಗ ಕೂಡ್ಲು ಶುಭಾಶಂಸನೆಗೈದರು. ಗೋಪಾಲಕೃಷ್ಣ ಬಲ್ಯಾಯ ಅವರು ಸ್ವಾಗತಿಸಿ, ವಿಘ್ನೇಶ್ ಕಾರಂತ ವಂದಿಸಿದರು. ಸುರೇಶ್ ಮಣಿಯಾಣಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಬಾಯಾರು ಮುಳಿಗದ್ದೆ ನಾರಾಯಣ ಆಚಾರ್ಯ ಅವರಿಂದ ಯಕ್ಷಗಾದ ಮಿಮಿಕ್ರಿ ನಡೆಯಿತು. ಮದ್ದಳೆಯಲ್ಲಿ ರಿತೇಶ್ ಅಡ್ಕ ಸಹಕರಿಸಿದರು. ಸುರೇಂದ್ರ ಕೂಡ್ಲು ನಿರೂಪಿಸಿದರು. ನಂತರ ತರಬೇತಿ ಕೇಂದ್ರದ ಸದಸ್ಯರಿಂದ `ಕುಂಭಕರ್ಣ ಕಾಳಗ' ಮತ್ತು `ಗದಾಯುದ್ಧ' ಯಕ್ಷಗಾನ ಬಯಲಾಟ ಜರಗಿತು. ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟ್ರಮಣ ಭಟ್, ರಾಮ ಪ್ರಸಾದ್ ಮಯ್ಯ, ಹರೀಶ್ ಅಡೂರು ಮತ್ತು ರಿತೇಶ್ ಅಡ್ಕ ಸಹಕರಿಸಿದರು. ಮುಮ್ಮೇಳದಲ್ಲಿ ಅಚ್ಯುತ ಬಲ್ಯಾಯ, ಚಂದ್ರಮೋಹನ, ಅರ್ಪಿತ್ ಶೆಟ್ಟಿ, ಅರುಣ್ ಪಾಟಾಳಿ, ಕಿಶೋರ್ ಕೂಡ್ಲು, ರಾಕೇಶ್ ಗೋಳಿಯಡ್ಕ, ಹರಿಪ್ರಸಾದ್ ಆಚಾರ್ಯ, ಕು.ವೆಷ್ಣವಿ, ಲತೇಶ್ ಆಚಾರ್ಯ, ಶ್ರೀರಾಮ್ ಕೂಡ್ಲು, ಆಕಾಶ್, ವಿಕಾಸ್ ಜಿ.ಕೆ, ಅನ್ವಿತ್, ಅರ್ಜುನ್, ಕು.ಶಮಿತಾ, ಶ್ರೀವತ್ಸ ಮತ್ತು ಕೃಷ್ಣ ಪ್ರಣಾಮ್ ಭಾಗವಹಿಸಿದರು.