ಮುಳ್ಳೇರಿಯ: ಕೇರಳ ತುಳು ಅಕಾಡೆಮಿಯ ಪ್ರಥಮ ಅಧ್ಯಕ್ಷ ದಿ.ವೆಂಕಟರಾಜ ಪುಣಿಚ್ಚಿತ್ತಾಯರ ಸ್ವಗ್ರಾಮದ ಶಾಲೆ, ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಕಾಡೆಮಿಯ ಆಶ್ರಯದಲ್ಲಿ ಆ.15ರಂದು ಮಧ್ಯಾಹ್ನ 2 ಗಂಟೆಯಿಂದ 'ಆಟಿದ ಐಸಿರೊ 2019' ಕಾರ್ಯಕ್ರಮ ನಡೆಯಲಿದೆ.
ಇದರ ಯಶಸ್ವಿಗಾಗಿ ಸ್ವಾಗತ ಸಮಿತಿ ಸಭೆ ಬೆಳ್ಳೂರು ಸರ್ಕಾರಿ ಶಾಲೆಯಲ್ಲಿ ಮಂಗಳವಾರ ನಡೆಯಿತು. ತುಳು ಅಕಾಡಮಿ ಅಧ್ಯಕ್ಷ ಉಮೇಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದರು. ಓಲೆಸರಿ ಸುಬ್ರಹ್ಮಣ್ಯ ಭಟ್, ಅಕಾಡೆಮಿ ಸದಸ್ಯ ರವೀಂದ್ರ ರೈ ಮಲ್ಲಾವರ, ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಉಪಸ್ಥಿತರಿದ್ದರು. ಮಂಜೇಶ್ವರ ಉಪಜಿಲ್ಲಾ ಯೋಜನಾಧಿಕಾರಿ, ಅಕಾಡೆಮಿ ಕಾರ್ಯದರ್ಶಿ ವಿಜಯ ಕುಮಾರ್ ಪಾವಳ ಸ್ವಾಗತಿಸಿ, ವಂದಿಸಿದರು.