ನವದೆಹಲಿ: ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ವಾಪಸ್ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿರುವ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಎದುರಾಗಿದೆ ಎಂದು ನೊಬೆಲ್ ಪುರಸ್ಕೃತೆ ಮಲಾಲಾ ಯುಸೂಫಾಜಿ ಟ್ವೀಟ್ ಮಾಡಿದ್ದಾರೆ,
ನನ್ನ ತಾತ, ನನ್ನ ತಂದೆ ತಾಯಿ ಹಾಗೂ ನಾನು ಬಾಲ್ಯದಲ್ಲಿದ್ದಾಗಿಂದಲೂ ಕಾಶ್ಮೀರದ ಜನತೆ ಸಂಘರ್ಷದಲ್ಲಿಯೇ ಬದುಕುತಿದ್ದಾರೆ, ಹೀಗಾಗಿ ಇಂದು ನನಗೆ ಕಾಶ್ಮೀರದ ಮಹಿಳೆ ಮತ್ತು ಮಕ್ಕಳ ಬಗ್ಗೆ ಚಿಂತೆಯಾಗುತ್ತಿದೆ, ಮತ್ತಷ್ಟು ಹಿಂಸಾಚಾರ ಹೆಚ್ಚುವ ಸಾಧ್ಯತೆಯಿದೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರಿ ಆರ್ಟಿಕಲ್ 370ನೇ ವಿಧಿಯನ್ನು ರದ್ದುಗೊಳಿಸಿದ್ದರ ಹಿನ್ನೆಲೆಯಲ್ಲಿ ಮಲಾಲಾ ಯೂಸೂಫ್ ಟ್ವೀಟ್ ಮಾಡಿದ್ದಾರೆ.
The people of Kashmir have lived in conflict since I was a child, since my mother and father were children, since my grandparents were young.
17.5K people are talking about this