ಬದಿಯಡ್ಕ: ಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುವುದು ನಮ್ಮೆಲ್ಲರ ಸಾಮಾಜಿಕ ಹೊಣೆಯಾಗಿದೆ ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಕಡಾರ್ ಅಭಿಪ್ರಾಯ ಪಟ್ಟರು.
ಅವರು ಶ್ರೀ ಅನಂತ ಭಟ್ ಸ್ಮಾರಕ ಪಂಚಾಯತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಗಿರಿಯಲ್ಲಿ ನೆರೆ ಪರಿಹಾರ ನಿಧಿ ಹುಂಡಿಗೆ ಶುಕ್ರವಾರಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹರಿಪ್ರಸಾದ್ ಮುನಿಯೂರು ಅಧ್ಯಕ್ಷತೆ ವಹಿಸಿದ್ದರು. ಮಾತೃಸಂಘದ ಅಧ್ಯಕ್ಷೆ ಅನಿತಾ ಕರ್ವಲ್ತಡ್ಕ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರವೀಂದ್ರ.ಬಿ ಮೊದಲಾದವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಲಲಿತಾಂಬಿಕ ಸ್ವಾಗತಿಸಿ, ಅಧ್ಯಾಪಿಕೆ ಅನಿತ ವಂದಿಸಿದರು. ವಿದ್ಯಾರ್ಥಿಗಳ ಪೋಷಕರು, ಅಧ್ಯಾಪಕರು,ಮಕ್ಕಳು,ಊರವರು ನೆರೆ ಪರಿಹಾರ ನಿಧಿಗೆ ಉದಾರವಾಗಿ ಧನಸಹಾಯ ನೀಡಿದರು.