ಮಂಜೇಶ್ವರ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಲಯಾಳಿಗಳಾಗಿರುವ ಯುವಕರ ವಿರುದ್ಧ ಇಲ್ಲಿಯ ಅಧಿಕಾರಿಗಳು ನಿರಂತರವಾಗಿ ನೀಡುತ್ತಿರುವ ಕಿರುಕುಳದ ವಿರುದ್ಧ ಕೇರಳ ಪ್ರವಾಸಿ ಸಂಘಟನೆ ರಂಗಕ್ಕಿಳಿದಿದೆ.
ಮಲಯಾಳಿ ಪ್ರವಾಸಿಗಳ ವಿರುದ್ಧ ಹಿನಾದಾಯಕವಾದ ರೀತಿಯಲ್ಲಿ ಕಿರುಕುಳವನ್ನು ನೀಡುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಯಾವುದೇ ಕ್ರಮ ಉಂಟಾಗಿಲ್ಲ. ಎಮಿಗ್ರೇಶನ್, ಕಸ್ಟಮ್ಸ್ ಸಹಿತ ಇತರ ವಿಭಾಗಗಳಲ್ಲಿ ಅಧಿಕಾರಿಗಳು ಕೂಡಾ ಮಲಯಾಳಿಗಳನ್ನು ಹುಡುಕಿ ಕಿರುಕುಳ ನೀಡುತ್ತಿರುವುದಾಗಿ ಕೇರಳ ಪ್ರವಾಸಿ ಸಂಘದ ಮಂಜೇಶ್ವರ ಏರಿಯಾ ಕಮಿಟಿ ಅಧ್ಯಕ್ಷರಾದ ಬಶೀರ್ ದೇವಕಾನ ಗಂಭೀರವಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ .
ಇತ್ತೀಚಿನ ದಿನಗಳಲ್ಲಿ ಮಲಯಾಳಿಗಳಿಗೆ ಕಿರುಕುಳ ನೀಡುತ್ತಿರುವುದು ನಿತ್ಯ ವರದಿಯಾಗಿದೆ. ಪಾಸ್ ಪೋರ್ಟಿನ ವೀಸಾ ಪುಟವನ್ನು ಹರಿದು ತೆಗೆಯುವುದು, ಕೊಲ್ಲಿ ರಾಷ್ಟ್ರಗಳಿಂದ ತೆರಿಗೆ ಕಟ್ಟಿ ತರುತ್ತಿರುವ ಸಾಮಾಗ್ರಿಗಳನ್ನು ಇಲ್ಲ ಸಾಲದ್ದ ಕಾರಣ ನೀಡಿ ಕಟ್ಟವನ್ನು ಬಿಚ್ಚಿಸಿ ಸಾಮಾಗ್ರಿಗಳನ್ನು ಲೂಟಿಗೈಯುತ್ತಿರುವ ಹೀನಾದಾಯ ಕೃತ್ಯಗಳನ್ನು ಕಂಡೂ ಕಾಣದಂತೆ ನಟಿಸಲು ಸಾಧ್ಯವಿಲ್ಲವೆಂಬುದಾಗಿ ಪದಾಧಿಕಾರಿಗಳು ಗಂಭೀರವಾದ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ .
ಕೆಲದಿನಗಳ ಹಿಂದೆ ಕಾಸರಗೋಡು ನಿವಾಸಿಗಳನ್ನು ತಪಾಸಣೆಯ ಹೆಸರಲ್ಲಿ ನಗ್ನರನ್ನಾಗಿಸಿ ಸುಮಾರು ಹತ್ತು ತಾಸುಗಳ ತನಕ ನಿರಂತರ ಕಿರುಕುಳ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸುವಂತೆಯೂ ವ್ಯೋಮಯಾನ ಸಚಿವ, ಸಂಸದ ಹಾಗೂ ಸಿಟಿ ಕಮೀಷನರಿಗೆ ದೂರುಗಳನ್ನು ನೀಡುವುದಾಗಿಯೂ ಅವರು ತಿಳಿಸಿದರು .
ಪತ್ರಿಕಾ ಗೋಷ್ಠಿಯಲ್ಲಿ ಬಿ ಎ ಬಶೀರ್ , ಖಾದರ್ ಬಿ ಎ , ಅಹ್ಮದುಲ್ ಅಮೀರ್ , ಸದಾನಂದ ಕೋರಿಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು.