ಮಂಜೇಶ್ವರ: ವಜ್ರಜ್ಯುಬಿಲಿ ಫೆಲೋಶಿಪ್ ಯೋಜನೆಗೆ ಮಂಜೇಶ್ವರ ಬ್ಲಾಕ್ ನಲ್ಲಿ ಸೋಮವಾರ ಚಾಲನೆ ನೀಡಲಾಗಿದೆ.
ರಾಜ್ಯದ ಪಾರಂಪರಿಕ ಕಲೆಗಳನ್ನು ಉಳಿಸಿ,ಬೆಳೆಸುವ ಮತ್ತು ಅವುಗಳ ಮಹತ್ವವನ್ನು ಯುವಜನತೆಗೆ ಹಸ್ತಾಂತರಿಸುವ ಉದ್ದೇಶದಿಂದ ರಾಜ್ಯ ಸಂಸ್ಕೃತಿ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ರಚಿಸಿರುವ ಯೋಜನೆ ಈ ಮೂಲಕ ಆರಂಭಗೊಂಡಿದೆ.
ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಯೋಜನೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಗ್ರಾಮೀಣ ಪ್ರದೇಶಗಳಲ್ಲಿ ವಿನಾಶದ ಅಂಚನ್ನು ಕಾಣುತ್ತಿರುವ ಸನಾತನ ಕಲೆಗಳಿಗೆ ಪುನರುಜ್ಜೀವನ ಒದಗಿಸಬೇಕಾದುದು ಮತ್ತು ಆ ಕಲೆಗಳನ್ನೇ ಆಶ್ರಯಿಸಿ ಬದುಕುತ್ತಿರುವವರನ್ನು ಪ್ರಧಾನ ವಾಹಿನಿಗೆ ಕರೆತರಬೇಕಾದುದು ಸಾಮಾಜಿಕ ಹೊಣೆಗಾರಿಕೆ. ಒಗ್ಗಟ್ಟಿನಿಂದ ಒಳ್ಳೆಯ ನಾಳೆಯನ್ನು ಮುಂದಿನ ತಲೆಮಾರಿಗಾಗಿ ನಾವು ಒದಗಿಸಬಹುದು ಎಂದು ಅಭಿಪ್ರಾಯಪಟ್ಟರು.
ಉಪಾಧ್ಯಕ್ಷೆ ಮಮತಾ ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಚಿತ್ರತಾರೆ ಯೋಗೀಶ್, ಪ್ರಕಾಶ್ ತೂಮಿನಾಡ್ ಮುಖ್ಯ ಅತಿಥಿಯಾಗಿದ್ದರು. ಎಂ.ಫಿಲ್ ನಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಕೊರಗ ಜನಾಂಗದ ಮೀನಾಕ್ಷಿ ಅವರನ್ನು ಅಭಿನಂದಿಸಲಾಯಿತು. ವಿವಿಧ ಗ್ರಾಮಪಂಚಾಯತಿ ಅಧ್ಯಕ್ಷರುಗಳಾದ ಅಬ್ದುಲ್ ಅಝೀಝ್ ಮಂಜೇಶ್ವರ, ಬಿ.ಎ.ಅಬ್ದುಲ್ ಮಜೀದ್ ವರ್ಕಾಡಿ, ಭಾರತೀ ಜೆ.ಶೆಟ್ಟಿ ಪೈವಳಿಕೆ, ಶಾಹುಲ್ ಹಮೀದ್ ಬಂದ್ಯೋಡು, ವೈ.ಶಾರದಾ ಪೆರ್ಲ, ಅರುಣಾ ಜೆ.ಪುತ್ತಿಗೆ, ಶಂಸಾದ್ ಶುಕೂರ್ ಮೀಂಜ, ಬ್ಲಾಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾದ ಬಹರಿನ್ ಮಹಮ್ಮದ್, ಮಹಮ್ಮದ್ ಮುಷ್ತಫಾ, ಫಾತಿಮತ್ ಸುಹರಾ, ಸದಸ್ಯರಾದ ಮಿಸ್ ಬಾನಾ, ಸಾಯಿರಾ ಬಾನು, ಹಸೀನಾ, ಸವಿತಾ ಬಾಳಿಕೆ, ಆಶಾಲತಾ, ಸಪ್ರಿನಾ, ರಾಮ ಪ್ರಸಾದ್ ರೈ ಕಯ್ಯಾರ್, ಕೆ.ಆರ್.ಜಯಾನಂದ, ಸದಾಶಿವ, ಪ್ರದೀಪ್ ಕುಮಾರ್, ಬ್ಲಾಕ್ ಪಂಚಾಯಿತಿ ಕಾರ್ಯದರ್ಶಿ ಸುರೇಂದ್ರನ್, ಫೆಲೋಶಿಪ್ ಕಲಾವಿದರಾದ ಸತೀಶ ಕೆ., ಮೋಹನ ಪಡ್ರೆ, ರತೀಶ್ ಟಿ., ರಾಹುಲ್ ರಾಜ್ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಕಲಾ ಕಾರ್ಯಕ್ರಮಗಳು ನಡೆದುವು.