ಕಾಸರಗೋಡು: ಕಟ್ಟಡ ನಿರ್ಮಾಣ ಸಂಬಂಧ ಸಲ್ಲಿಸಲಾದ ಅರ್ಜಿಗಳ ತೀರ್ಪು ಸಂಬಂಧಿ ಅದಾಲತ್ ಕಾಸರಗೋಡು ಜಿಲ್ಲಾ ಯೋಜನೆ ಸಮಿತಿ ಸಭಾಂಗಣದಲ್ಲಿ ಜರಗಿತು.
ಕಾರಡ್ಕ, ಕುಂಬ್ಡಾಜೆ, ಕುಂಬಳೆ, ಮಧೂರು, ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ಮೊಗ್ರಾಲ್ ಪುತ್ತೂರು, ಮುಳಿಯಾರು, ಪೈವಳಿಕೆ, ಚೆಂಗಳ ಗ್ರಾಮ ಪಂಚಾಯತ್‍ಗಳ ಅರ್ಜಿಗಳನ್ನು ಪರಿಶೀಲಿಸಲಾಯಿತು. ಒಟ್ಟು ಸಲ್ಲಿಸಲಾದ 106 ಅರ್ಜಿಗಳಲ್ಲಿ 16 ಅರ್ಜಿಗಳಿಗೆ ತೀರ್ಪು ನೀಡಲಾಗಿದೆ. ಉಳಿದ 90 ಅರ್ಜಿಗಳನ್ನು ಮುಂದಿನ ಕ್ರಮಗಳಿಗಾಗಿ ಶಿಫಾರಸು ಮಾಡಲಾಗಿದೆ.