HEALTH TIPS

ಮತದಾತರ ಪಟ್ಟಿ ನವೀಕರಣ: ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ


      ಕಾಸರಗೋಡು: ಮತದಾತರ ಪಟ್ಟಿ ನವೀಕರಣ ಸಂಬಂಧ ಜಿಲ್ಲೆಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಶನಿವಾರ ಜರುಗಿತು.
           ಮುಂದಿನ ವಿಧಾನಸಭೆ ಚುನಾವಣೆ ಮತ್ತು ಮಂಜೇಶ್ವರ ಉಪಚುನಾವಣೆಯ ಪೂರ್ವಭಾವಿಯಾಗಿ ಮತದಾತರ ಪಟ್ಟಿ ಸುಧಾರಿತಗೊಳಿಸುವ ನಿಟ್ಟಿನಲ್ಲಿ ಚುನಾವಣೆ ಆಯೋಗ ಕ್ರಮಕೈಗೊಂಡಿದ್ದು,ಇದರ ಅಂಗವಾಗಿ ಈ ಸಭೆ ಜರುಗಿತು.
     ಜಿಲ್ಲಾಧಿಕಾರಿ ಕಚೇರಿಕಿರು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
       ಮಂಜೇಶ್ವರ ಉಪಚುನಾವಣೆಯ ಹಿನ್ನೆಲೆಯಲ್ಲಿ ಮತದಾತರ ಪಟ್ಟಿ, ಬೂತ್ ಗಳ ಸಿದ್ದತೆಗೆ ಆದ್ಯತೆ ನೀಡಲಾಗುತ್ತಿದೆ. ಕ್ಷೇತ್ರದ ಕೆಲವು ಮತಗಟ್ಟೆಗಳ ಬಗ್ಗೆ ದೂರುಗಳು ಲಭಿಸಿದ್ದು, ಈ ಸಂಬಂಧ ಪರಿಶೀಲನೆ ನಡೆಸಲಾಗುವುದು. ಲೊಕೇಷನ್ ಬದಲಿಸದೆ ಬೂತ್ ಗಳನ್ನು ಸೌಕರ್ಯಯುತವಾದ ಕಟ್ಟಡಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಆ.10ರ ಮುಂಚಿತವಾಗಿ ಅರ್ಜಿ  ಸಲ್ಲಿಸಬೇಕು. ಲೊಕೇಷನ್ ಬದಲಿಸಬೇಕಿದ್ದಲ್ಲಿ ಆ.15ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಜಾರಿಯಲ್ಲಿರುವ ಕಾನೂನು ಪ್ರಕಾರ ಈ ಸಂಬಂಧ ತೀರ್ಮಾನಕೈಗೊಳ್ಳಲಾಗುವುದು. ಸಮೀಪದಲ್ಲೇ ಮತಗಟ್ಟೆಗಳಿದ್ದೂ, ದೂರದ ಕೇಂದ್ರಗಳಲ್ಲಿ ಮತದಾನ ನಡೆಸಬೇಕಾಗಿ ಬಮದಿರುವ ಸಂಬಂಧದೂರಿನಕುರಿತು ಪರಿಶೀಲನೆನಡೆಸಲಾಗುವುದು. ಮತದಾರರಿಗೆ ಒಟ್ಟಂದದಲ್ಲಿರುವ ಮತಗಟ್ಟೆಗಳಲ್ಲಿ ಬದಲಾವಣೆಗೆ ಅನುಮತಿ ನೀಡುವುದಿಲ್ಲ ಎಂದು ಸಭೆ ತಿಳಿಸಿದೆ.
     ಬಿ.ಎಲ್.ಒ.ಗಳು ರಾಜಕೀಯ ಪ್ರೇರಿತರಾಗಿ ಚಟುವಟಿಕೆ ನಡೆಸಿದಲ್ಲಿಕಠಿನ ಕ್ರಮ ಕೈಗೊಳ್ಳಲಾಗುವುದು. ಮತದಾತರ ಪಟ್ಟಿಯಲ್ಲಿಹೆಸರು ಸೇರ್ಪಡೆಗೊಳಿಸುವ ಮತ್ತು ತೆರವುಗೊಳಿಸುವ ನಿಟ್ಟಿನಲ್ಲಿ ನಿಗದಿತಮಾದರಿಯ ಅರ್ಜಿ ಸಲ್ಲಿಸಿದರೆ ಆಯೋಗ ಯಥಾಕ್ರಮದಂತೆ ಹಿಯರಿಂಗ್ ನಡೆಸಿದ ನಂತರವೇ ತೀರ್ಮಾನಕೈಗೊಳ್ಳಲಿದೆ. ಬಿ.ಎಲ್.ಒ.ಗಳು ಎಲ್ಲ ರಾಜಕೀಯ ಪಕ್ಷಗಳ ಬೂತ್ಲೈನ್ ಏಜೆಂಟರಿಗೂ ಮಾಹಿತಿ ನಿಡಬೇಕು. ಅರ್ಹರನ್ನು ಮತಪಟ್ಟಿಯಲ್ಲಿ ಸೇರ್ಪಡೆಗೊಳಿಸಿ, ಅನರ್ಹರನ್ನು ತೆರವುಗೊಳಿಸುವ ಕ್ರಮಕೈಗೊಳ್ಳಲಾಗುವುದು. ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳ ಮತ್ತು ಸಾರ್ವಜನಿಕರ ಬೆಂಬಲ ಅಗತ್ಯ ಎಂದು ಜಿಲ್ಲಾಧಿಕಾರಿ ಹೇಳಿದರು. 
       ಆ.31ವರೆಗೆ ಇಲೆಕ್ಟರ್ಸ್ ವೇರಿಫಿಕೇಶನ್ ಪ್ರೋಗ್ರಾಂ(ಇ.ವಿ.ಪಿ) ಕ್ಯಾಂಪ್ ನಡೆಸಲಾಗುವುದು. ಮತದಾತರ ಪಟ್ಟಿಯಲ್ಲಿ ತಮ್ಮಹೆಸರಿದೆಯೇ ಎಂದು ಮತದಾತರು ಪರಿಸೀಲಿಸಿ ಖಚಿತಪಡಿಸಬೇಕು. ಹಿಂದೆ ಮತದಾನನಡೆಸಿದ್ದರೂ, ತಾಂತ್ರಿಕಕಾರಣ ಇತ್ಯಾದಿಗಳಿಂದ ಹೆಸರು ಇಲ್ಲದೇ ಹೋಗುವ ಸಾಧ್ಯತೆಗಳಿವೆ. ಅಂತಿಮ ಮತದಾತರ ಪಟ್ಟ ಸಿದ್ಧಗೊಳ್ಳುವ ಮುನ್ನ ಸುಧಾರಿತವಾಗಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಅವಕಶಗಳಿವೆ. 18 ವರ್ಷ ಪ್ರಾಯದ ಪೂರ್ಣಗೊಂಡಿರುವ ಮಂದಿಯ ಹೆಸರನ್ನು ಮತದಾತರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಮತ್ತು ಮೃತಪಟ್ಟವರ ಹೆಸರನ್ನು ತೆರವುಗೊಳಿಸುವ ಕಾರ್ಯಕ್ಕೆ ರಾಜಕೀಯ ಪಕ್ಷಗಳು ಮಹತ್ವ ನೀಡಬೇಕು.
      ಸೆ.1ರಿಂದ 30 ವರೆಗೆ ಬಿ.ಎಲ್.ಒ.ಗಳು ಮನೆಗಳಿಗೆ ತಲಪಿ ಮತದಾತರ ಮಾಹಿತಿ ಪರಿಶೀಲಿಸುವರು. ಸೆ.15ರಂದು ಸಂಯೋಜಿತ ಕರಡು ಮತದಾತರ ಪಟ್ಟಿ ಪ್ರಕಟಿಸಲಾಗುವುದು. ಸೆ.30 ವರೆಗೆ ದೂರುಗಳು,ಹಕ್ಕುಗಳು ಇದ್ದಲ್ಲಿ ಸಲ್ಲಿಸಬಹುದು. ಡಿ.15ರ ಮುಮಚಿತವಾಗಿ ದೂರುಗಳಿಗೆ ತೀರ್ಪುನೀಡಲಾಗುವುದು. 2010 ಜನವರಿಒಂದರಿಂದ 15ರ ನಡುವೆ ಅಂತಿಮ ಮತದಾತರ ಪಟ್ಟಿ ಪ್ರಕಟಿಸಲಾಗುವುದು ಎಂದು ಸಭೆ ತಿಳಿಸಿದೆ.
      ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ಕಿರಿಯ ವರಿಷ್ಠಾಧಿಕಾರಿ ಎಸ್.ಗೋವಿಂದನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries