ಕಾಸರಗೋಡು: ತೀವ್ರಗೊಂಡಿರುವ ಮಳೆಯ ಕಾರಣ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಎಲ್ಲ ತಹಸೀಲ್ದಾರರೂ, ಗ್ರಾಮಾಧಿಕಾರಿಗಳೂ ಜಾಗರೂಕರಾಗಿರುವಂತೆ ಆದೇಶ ನೀಡಿದ್ದಾರೆ. ಸಾರ್ಜನಿಕರು ಮಳೆಯ ಹಾನಿಕುರಿತು ದೂರು ನೀಡುವ ನಿಟ್ಟಿನಲ್ಲಿ ಗ್ರಾಮ,ತಾಲೂಕು,ಜಿಲ್ಲಾ ಮಟ್ಟಗಳಲ್ಲಿ 24 ತಾಸುಗಳೂ ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿಗಳಿವೆ.
ಮಂಜೇಶ್ವರ ತಾಲೂಕಿನಲ್ಲಿ ಕಡಲ್ಕೊರೆತ ನಿಯಂತ್ರಿಸಲು ಬೇಕಾದ ಕ್ರಮಗಳನ್ನು ಇರಿಗೇಶನ್ ಇಲಾಖೆ ಮೂಲಕ ಜಾರಿಗೊಳಿಸಲಾಗಿದೆ. ಕಡಲ್ಕೊರೆತ ಭೀತಿ ಎದುರಿಸುತ್ತಿರುವ ಪ್ರದೆಶಗಳಲ್ಲಿ ಜಿಯೋ ಬ್ಯಾಗ್ ಗಳು, ಸಂರಕ್ಷಣೆ ಭಿತ್ತಿಗಳು ನಿರ್ಮಿಸಲು ಜಿಲ್ಲಾಧಿಕಾರಿ ಆದೇಶ ನೀಡಿದರು. ಯಾವುದೇ ತುರ್ತುಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತೆ ಸಿದ್ಧವಾಗಿದೆ. ಜಿಲ್ಲೆಯಲ್ಲಿ ಒಂದು ಪುನರ್ವಸತಿ ಕೇಂದ್ರ ಮಾತ್ರ ಈಗ ಚಟುವಟಿಕೆ ನಡೆಸುತ್ತಿದೆ.
ನಾಳೆ ಹಾಗೂ ನಾಡಿತು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್:
ಕೇಂದ್ರ ಹವಾಮಾನ ನಿಗಾ ಇಲಾಖೆ ಕಾಸರಗೋಡು ಜಿಲ್ಲೆಯಲ್ಲಿ ನಾಳೆ (ಆ.9) ಮತ್ತು ನಾಡಿತು(ಆ.10)ಆರಂಜ್ ಅಲರ್ಟ್ ಮತ್ತು ಆ.11,12ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ.