ಕುಂಬಳೆ: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನ ಕನ್ನಡಿಗರಿಗೆ ಸಂವಿಧಾನಬದ್ಧವಾಗಿ ಲಭಿಸಬೇಕಾದ ಸೌಲಭ್ಯಗಳನ್ನು ಮಲಯಾಳಿ ಅಧಿಕಾರಿಗಳು ವಿವಿಧ ನೆಪಗಳನ್ನು ಹೇಳಿ ನಿರಾಕರಿಸುವ ನೀತಿಯನ್ನು ಕೊನೆಗೊಳಿಸಿ ನ್ಯಾಯ ದೊರಕಿಸಿಕೊಡಲು ಕನ್ನಡ ಹೋರಾಟ ಸಮಿತಿ ನಿರಂತರ ಹೋರಾಟ ಮಾಡುತ್ತಿದೆ. ಈ ದೃಷ್ಟಿಯಿಂದ ರಾಜಕೀಯೇತರವಾಗಿ ಕನ್ನಡಿಗರನ್ನು ತಳಮಟ್ಟದಿಂದ ಸಂಘಟಿಸುವ ಕೆಲಸ ನಡೆಯುತ್ತಿದೆ.
ಕನ್ನಡ ಹೋರಾಟ ಸಮಿತಿಯ ಕುಂಬಳೆ ಗ್ರಾಮ ಪಂಚಾಯತಿ ಮಟ್ಟದ ಕನ್ನಡಿಗರ ಸಭೆ ಇಂದು(ಆ.30) ಸಂಜೆ 3.30 ಕ್ಕೆ ಬದಿಯಡ್ಕ ರಸ್ತೆಯ ಅನ್ನಪೂರ್ಣ ಹಾಲ್‍ನಲ್ಲಿ ಜರಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.