ಕಾಸರಗೋಡು: ಹಿಂದೂಸ್ತಾನ್ ಏರ್ನಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್) ನ ಸಾಮಾಜಿಕ ಬದ್ಧತೆ ನಿಧಿಯಿಂದ 23 ಲಕ್ಷ ರೂ. ವೆಚ್ಚದಲ್ಲಿ ವಿದ್ಯಾನಗರ ಸಿವಿಲ್ ಸ್ಟೇಷನ್ ಆವರಣದಲ್ಲಿ ನಿರ್ಮಿಸಲಾದ ಗ್ರಾಮೀಣ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಗೊಂಡಿದೆ.
ಶಾಸಕ ಎನ್.ಎ.ನೆಲಲಿಕುನ್ನು ಕ್ರೀಡಾಂಗಣ ಉದ್ಘಾಟಿಸಿದರು ಈ ಸಂದರ್ಭ ಮಾತನಾಡಿದ ಅವರು ಕ್ರೀಡಾ ಪ್ರೇಮಿಗಳ ಮನೋಬಲ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರೀಡಾಂಗಣಪೂರಕವಾಗಿದ್ದು, ಇದಕ್ಕೆ ಜಿಲ್ಲಡಳಿತದ ಬೆಂಬಲವಿದೆ. ಎಚ್.ಎ.ಎಲ್. ಸಂಸ್ಥೆ ಜಿಲ್ಲೆಯಹೆಚ್ಚುವರಿ ಅಭಿವೃದ್ಧಿಗೆ ಇನ್ನಷ್ಟು ಬೆಂಬಲ ನೀಡುವ ನಿರೀಕ್ಷೆಯಿದೆ ಎಂದು ನುಡಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಎಚ್.ಎ.ಎಲ್.ಪ್ರಧಾನ ಪ್ರಬಂಧಕ ರಾಜೀವ್ ಕುಮಾರ್, ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹಮಾನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್,ಹಣಕಾಸು ಅಧಿಕಾರಿ ಕೆ.ಸತೀಶನ್, ಲೋಕೋಪಯೋಗಿಕಟ್ಟಡ ವಿಭಾಗ ಕಾರ್ಯಕಾರಿ ಇಂಜಿನಿಯರ್ ಸಿ.ರಾಜೇಶ್ ಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು.