ನವದೆಹಲಿ: ಭಾರತದಲ್ಲಿ ನೂರು ಕೋಟಿಗೂ ಅಧಿಕ ಜನರಿಗೆ ಆಧಾರ್ ಕಾರ್ಡ್ ಸಿಕ್ಕ ನಂತರ ಇದೀಗ ಭಾರತದ ಹಸುಗಳು ಮತ್ತು ಎಮ್ಮೆಗಳು ಆಧಾರ್‍ಗೆ ಅರ್ಜಿ ಸಲ್ಲಿಸುವ ಸರದಿ.
ಪ್ರಾಣಿಗಳ ಉತ್ಪಾದನೆ ಮತ್ತು ಆರೋಗ್ಯ(ಐಎನ್ ಎಪಿಹೆಚ್) ಪ್ರಾಣಿಗಳ ಆಧಾರ್ ಎಂದು ಕರೆಯಲಾಗುತ್ತದೆ. ಇದನ್ನು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ(ಎನ್‍ಡಿಡಿಬಿ) ಅಭಿವೃದ್ಧಿಪಡಿಸುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಐಎನ ಎಪಿಹೆಚ್ ವಿಶ್ವದ ಅತಿದೊಡ್ಡ ಪ್ರಾಣಿಗಳ ಡೇಟಾಬೇಸ್ ಆಗಿರಲಿದೆ.
ಜನರಿಗೆ ನೀಡಲಾಗಿರುವ ಆಧಾರ್ ಕಾರ್ಡ್ ಗಳಂತೆಯೇ ಐಎನ್ ಎಪಿಎಚ್ ಪ್ರತಿ ಪ್ರಾಣಿಗಳಿಗೆ ವಿಶಿಷ್ಠ ಗುರುತಿನ ಸಂಖ್ಯೆಯನ್ನು(ಯುಐಡಿ) ನಿಗದಿಪಡಿಸುತ್ತದೆ. ಮತ್ತು ಗೋ ಸಂತತಿ ಬಗ್ಗೆ ಅಗ್ಯವಿರುವ ಎಲ್ಲ ಮಾಹಿತಿಯ ದಾಖಲೆಗಳನ್ನು ಸಂಗ್ರಹಿಸಿಡಲಾಗುತ್ತದೆ. ಇದೇ ದೇಶದ ಅಪಾರ ಸಂಖ್ಯೆಯ ಜಾನುವಾರುಗಳನ್ನು ನಿರ್ವಹಿಸುವಲ್ಲಿ ಸರ್ಕಾರಕ್ಕೆ ಸಹಾಯವಾಗಲಿದೆ.
ಜಾನುವಾರು ಕಳ್ಳಸಾಗಣೆ ತಡೆಯಲು ಸಂಬಂಧ ಸುಪ್ರೀಂಕೋರ್ಟ್ 2015ರಲ್ಲಿ ಸರ್ಕಾರಿ ಸಮಿತಿಯು ಹಸುಗಳ ಕಳ್ಳಸಾಗಣೆ ತಡೆಗಟ್ಟಲು ಯುಐಡಿಗೆ ಶಿಫಾರಸು ಮಾಡಿತ್ತು.
ಪ್ರತಿ ಪ್ರಾಣಿಗೆ 12 ಸಂಖ್ಯೆಯ ಗುರುತಿನ ಅಂಕಿ ನೀಡಲಾಗುತ್ತದೆ. ಈ ಪ್ರಾಣಿ ಎಲ್ಲೇ ಇದ್ದರೂ ಅದರ ಆರೋಗ್ಯ ಸ್ಥಿತಿ, ಕಾಡಿದ ರೋಗಗಳು, ನೀಡಲಾದ ಚಿಕಿತ್ಸೆಯ ಸಂಪೂರ್ಣ ಮಾಹಿತಿ ಇಲಾಖೆಯಲ್ಲಿರುವ ಸರ್ವರ್ ನಲ್ಲಿ ದಾಖಲಾಗುತ್ತದೆ.