ಮಂಜೇಶ್ವರ: ಇತ್ತೀಚಿನ ದಿನಗಳಲ್ಲಿ ಮಂಜೇಶ್ವರ ಹಾಗೂ ಉಪ್ಪಳ ಪ್ರದೇಶಗಳು ಒಂದಲ್ಲ ಒಂದು ವಿವಾದಗಳ ಮೂಲಕ ಭಾರೀ ಸುದ್ದಿಯಾಗುತ್ತಿದೆ.
ಇದೀಗ ಬುಧವಾರ ತಡ ರಾತ್ರಿ ಹೊಸಂಗಡಿಯಲ್ಲಿ ಯುವಕನೊಬ್ಬನಿಗೆ ಗುಂಡು ಹೊಡೆದು ಕೊಲೆಗೈಯುವ ಯತ್ನ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಬದಿಯಡ್ಕ ಸಮೀಪದ ಚರ್ಲಡ್ಕ ನಿವಾಸಿ ಸಿರಾಜುದ್ದೀನ್ ಎಂಬಾತ ಗುಂಡೇಟಿಗೊಳಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಿ ಬಳಿಕ ಸ್ಥಿತಿ ಗಂಭೀರವಾಗಿರುವುದರಿಂದ ಗುರುವಾರ ಈತನನ್ನು ಎರ್ನಾಕುಳಂ ನ ಅಮೃತ ಆಸ್ಪತ್ರೆಗೆ ಸಾಗಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.
ಮೀಯಪದವು ನಿವಾಸಿಗಳಾದ ಗೂಂಡಾ ತಂಡವೊಂದು ಗುಂಡು ಹಾರಾಟ ನಡೆಸಿದ ಬಗ್ಗೆ ಪೊಲೀಸರಿಗೆ ಸೂಚನೆ ಲಭಿಸಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.