HEALTH TIPS

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜ್ವರಕ್ಕೆ ಚಿಕಿತ್ಸೆ ಪಡೆದವರ ಸಮಖ್ಯೆ ಕಡಿಮೆ: ಜಿಲ್ಲಾ ವೈದ್ಯಾಧಿಕಾರಿ


    ಕಾಸರಗೋಡು:  ಜಿಲ್ಲೆಯಲ್ಲಿ ಜ್ವರದಿಂದ ಚಿಕಿತ್ಸೆ ಪಡೆದವರು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಪಿ.ದಿನೇಶ್ ಕುಮಾರ್ ತಿಳಿಸಿರುವರು.
       2019 ಜನವರಿಯಿಂದ ಜುಲೈ 31 ವರೆಗೆ 95123 ಮಂದಿ ಜ್ವರ ತಗುಲಿದ ಪರಿಣಾಮ ಚಿಕಿತ್ಸೆ ಪಡೆದಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 102654 ಮಂದಿ ಜ್ವರದಿಂದ ಬಳಲಿ ಚಿಕಿತ್ಸೆ ಪಡೆದಿದ್ದರು ಎಂದವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
    ಈ ವರ್ಷ 473 ಮಂದಿ ಡೆಂಗೆಜ್ವರ ಬಾಧಿತರು ಎಂದು ಶಂಕಿಸಲಾಗಿದ್ದು, ಇವರಲ್ಲಿ 137 ಮಮದಿಗೆ ಡೆಂಗೆ ತಗುಲಿರುವುದು ಖಚಿತವಾಗಿತ್ತು. ಡೆಂಗೆಜ್ವರದಿಂದ ಈ ಬಾರಿ ಯಾರೂ ಮೃತಪಟ್ಟಿರುವುದು ವರದಿಯಾಗಿಲ್ಲ. 2018ನೇ ಇಸವಿಯನ್ನು ಹೋಲಿಸಿದರೆ ಡೆಂಗೆಜ್ವರ ತಗುಲಿರುವುದು ಮತ್ತು ಅದರಿಂದ ಮೃತಪಟ್ಟಿರುವ ಪ್ರಕರಣಗಳು ಕುಂಠಿತವಾಗಿದೆ ಎಂದು ಹೇಳಬಹುದು ಎಂದವರು ತಿಳಿಸಿದರು.
      2018ರಲ್ಲಿ ಡೆಂಗೆಜ್ವರ ತಗುಲಿರುವ ಸಂಶಯದಲ್ಲಿ 3115 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, 569 ಮಂದಿಗೆ ರೋಗತಗುಲಿರುವುದು ಖಚಿತವಾಗಿತ್ತು. 4 ಮಂದಿ ಮೃತಪಟ್ಟಿದ್ದರು. ಮೃತರಲ್ಲಿ ಮೂವರಿಗೆ ಈ ರೋಗ ತಗುಲಿರುವುದು ಖಚಿತವಾಗಿತ್ತು ಎಂದವರು ಹೇಳಿದರು.
     ಈ ವರ್ಷ ಇಲಿಜ್ವರತಗುಲಿರುವ ಸಂಶಯದಲ್ಲಿ ಜಿಲ್ಲೆಯಲ್ಲಿ 12 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, 7 ಮಂದಿಗೆ ಕಾಯಿಲೆ ತಗುಲಿರುವುದು ಖಚಿತವಾಗಿದೆ. ಇಲಿಜ್ವರದಿಂದ ಈ ವರ್ಷ ಯಾರೂ ಮೃತಪಟ್ಟಿರುವುದು ವರದಿಯಾಗಿಲ್ಲ. 2018ರಲ್ಲಿ 16 ಮಂದಿಯನ್ನು ಈ ರೋಗ ತಗುಲಿರುವ ಸಂಶಯದಲ್ಲಿ ತಪಾಸಣೆಗೊಳಪಡಿಸಲಾಗಿದ್ದು, 3 ಮಂದಿಗೆ ತಗುಲಿರುವುದು ಖಚಿತವಾಗಿತ್ತು. ಖಚಿತಗೊಂಡವರಲ್ಲಿ ಒಬ್ಬರುಮೃತಪಟ್ಟಿದ್ದರು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.
   ಮಲೇರಿಯಾ ರೋಗಬಾಧೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ. ಈ ವರೆಗೆ 33 ಮಂದಿಯಲ್ಲಿ ಈ ರೋಗ ಲಕ್ಷಣಕಂಡುಬಂದಿದೆ. ಕಳೆದ ವರ್ಷ 91 ಮಂದಿಗೆ ಈ ರೋಗ ತಗುಲಿರುವುದು ಖಚಿತವಾಗಿತ್ತು.   ಜಿಲ್ಲೆಯಲ್ಲಿ ಈ ವರ್ಷ 21663 ಮಂದಿ ಜಲೋದರ ರೋಗಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 20236 ಮಂದಿ ಈ ರೋಗಕ್ಕೆ ಚಿಕಿತ್ಸೆ ಪಡೆದಿದ್ದರು.
     ಹೈಪಟೈಟಸ್ ರೋಗ ಈ ವರ್ಷ ಹೆಚ್ಚಳಗೊಂಡಿರುವುದು ಪತ್ತೆಯಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಕಳಕಳಿ ವ್ಯಕ್ತಪಡಿಸಿದರು. 2018ರಲ್ಲಿ ಈ ಅವಧಿಯ್ಲಿ 71 ಮಂದಿಯಲ್ಲಿ ಈ ರೋಗ ಲಕ್ಷಣಗಳು ಕಂಡುಬಂದಿದ್ದುವು. ಆದರೆ ಈ ವರ್ಷ ಇದೇ ಅವಧಿಯಲ್ಲಿ 173 ಮಂದಿಯಲ್ಲಿ ಸಂಶಯವಿದ್ದು, 21 ಮಂದಿಯಲ್ಲಿ ಈ ರೋಗ ಖಚಿತವಾಗಿದೆ.
    2018 ರಲ್ಲಿ 4 ಮಂದಿಗೆ ಎಚ್1ಎನ್1 ರೋಗ ತಗುಲಿರುವ ಸಂದೇಹಗಳಿತ್ತು. ಈ ವರ್ಷ 34 ಮಂದಿಗೆ ಈ ರೋಗವಿರುವ ಸಂದೇಹಗಳಿವೆ. ಇವರಲ್ಲಿ 22 ಮಂದಿಯ ರೋಗ ಖಚಿತವಾಗಿದೆ ಎಂದವರು ನುಡಿದರು.
       ಜಿಲ್ಲೆಯ ಪುತ್ತಿಗೆ ಗ್ರಾಮಪಂಚಾಯತ್ ನಲ್ಲಿ ಸಹೋದರರಿಬ್ಬರು ಜ್ವರದಿಂದ ಮೃತಪಟ್ಟ ಪ್ರಕರಣದಲ್ಲಿ ಬ್ಯಾಕ್ಟೀರಯಾದಿಂದ ತಗುಲುವ ಮೀಲಿಯಾಯ್ ಡಾಸಿಸ್ಟ್ ಎಂಬಕಾಯಿಲೆ ಇವರಮರಣಕ್ಕೆ ಕಾರಣ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ ಎಂದು ಡಿ.ಎಂ.ಒ. ತಿಳಿಸಿದರು. ಜಿಲ್ಲೆಯಲ್ಲಿ ಎಚ್1,ಎನ್1 ಹೆಚ್ಚಳಗೊಂಡಿರುವವರದಿಗಳಿದ್ದರೂ, ಸಾರ್ವಜನಿಕರು ಭೀತರಾಗಬೇಕಿಲ್ಲ. ಅಗತ್ಯದ ಮುಂಜಾಗರೂಕ ಕ್ರಮಗಳನ್ನುಈಗಾಗಲೇ ಆರೋಗ್ಯ ಇಲಾಖೆ ಕೈಗೊಂಡಿದೆ ಮತ್ತು ಈ ರೋಗದ ಪ್ರತಿರೋಧಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳೂ ಸಿದ್ಧವಾಗಿವೆ ಎಂದವರು ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries